ಮೇರೆ ಮೀರಿದ ವಿಷ್ಣು ಅಭಿಮಾನಿಗಳ ಸಂತಸ

ವಿಷ್ಣುವರ್ಧನ್ ಅವರ 200ನೆಯ ಚಿತ್ರ ಮತ್ತು ಅವರ ಕೊನೆಯ ಚಿತ್ರ ಆಪ್ತರಕ್ಷಕ ಬಿಡುಗಡೆಯಾದಾಗ ಅಭಿಮಾನಿಗಳ ಸಂತಸಕ್ಕೆ ಎಣೆಯಿರಲಿಲ್ಲ. "ವಿಷ್ಣುವರ್ಧನ್ ಗೆ ಜಯವಾಗಲಿ, ಅಣ್ಣನಿಗೆ ಜಯವಾಗಲಿ, ಅಭಿನಯ ಭಾರ್ಗವ ಅಜರಾಮರ, ವಿಷ್ಣು ಚಿರಾಯು" ಎಂಬ ಜಯಘೋಷಗಳು ಮುಗಿಲು ಮುಟ್ಟಿದ್ದವು. ಸಿಳ್ಳೆಗಳಿಗಂತೂ ಕೊನೆಯೇ ಇರಲಿಲ್ಲ.
ಇದು ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ಶುಕ್ರವಾರ ಬೆಳಿಗ್ಗೆ ಕಂಡ ದೃಶ್ಯ. ಥಿಯೇಟರು ಎತ್ತರದ ಕಟೌಟ್ ಗೆ ಹೂವೇರಿಸಿ, ಕಾಯಿ ಒಡೆದು ಪೂಜೆ ಸಲ್ಲಿಸಲಾಯಿತು. ನೆರೆದಿದ್ದವರಿಗೆ ಸಿಹಿ ಹಂಚಲಾಯಿತು. ಬೆಳಿಗ್ಗೆ ಎಂಟು ಗಂಟೆಯಿಂದಲೇ ನೂರಾರು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಎರಡು ದಿನಗಳಿಂದ ಟಿಕೆಟ್ ಬುಕ್ ಆಗಿರುವುದರಿಂದ ಅನೇಕರು ಟಿಕೆಟ್ ಸಿಗದೆ ನಿರಾಶೆ ಅನುಭವಿಸಬೇಕಾಯಿತು. ಮುಂಗಡ ಟಿಕೆಟ್ ಬುಕ್ ಮಾಡಿದವರಿಗಂತೂ ಆಕಾಶ ಮೂರೇ ಗೇಣು.
ಅಣೆಕಟ್ಟೆ ಗೇಟು ತೆರೆದಾಗ ನುಗ್ಗುವ ನೀರಿನಂತೆ ಥಿಯೇಟರಿಗೆ ನುಗ್ಗಿದ ಜನರಿಗೆ ಇದ್ದದ್ದು ಒಂದೇ ಆಶಯ, ವಿಷ್ಣುವನ್ನು ತೆರೆಯ ಮೇಲೆ ನೋಡಬೇಕು, ಕಣ್ತುಂಬಿಕೊಳ್ಳಬೇಕು. ಹಲವರಿಗೆ ಕಣ್ಣಿನ ಕ್ರಸ್ಟ್ ಗೇಟ್ ಕೂಡ ತೆರೆದಿತ್ತು, ಅಶ್ರು ಧಾರೆಧಾರೆಯಾಗಿ ಹರಿದಿತ್ತು. ಕೆಲವರಿಗೆ ಆನಂದಕ್ಕೆ ಪಾರವೇ ಇರಲಿಲ್ಲ. ಹೂವಿನ ಪಕಳೆಗೊಂದಿಗೆ ಚಿಲ್ಲರೆಗಳನ್ನು ತೂರಿದಾಗಲೇ ಕೆಲವರಿಗೆ ಆನಂದ. ಒಬ್ಬರಿಂದೊಬ್ಬರಿಗೆ ಪಾಸ್ ಆದ ಚಾಕಲೇಟುಗಳಿಗಂತೂ ಲೆಕ್ಕವೇ ಇರಲಿಲ್ಲ.
ವಿಷ್ಣುವಿನ ಪುಟ್ಟಪುಟ್ಟ ಪೋಸ್ಟರುಗಳಿಗಂತೂ ಲೆಕ್ಕವೇ ಇರಲಿಲ್ಲ. ಹಲವರು ಕೈಯಲ್ಲಿ ವಿಷ್ಣು ಕುರಿತು ಬರೆದ ಪುಸ್ತಕವನ್ನೂ ಥಿಯೇಟರಿಗೆ ತಂದಿದ್ದರು. ಆಪರಿಯಿತ್ತು ಅಭಿಮಾನದ ಪ್ರವಾಹ. ವಿಷ್ಣು ಅವರಂತೆ ವೇಷ ತೊಟ್ಟ ವ್ಯಕ್ತಿ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದ.
ವಿಷ್ಣು ಚಿತ್ರಕ್ಕೆ ರಾಜ್ಯಾದ್ಯಂತ ಭರ್ಜರಿ ಓಪನಿಂಗ್ ಸಿಕ್ಕಿರುವುದೇನೋ ನಿಜ. ಸುಮಾರು 70ಕ್ಕೂ ಹೆಚ್ಚಿನ ಥಿಯೇಟರುಗಳಲ್ಲಿ ಆಪ್ತರಕ್ಷಕ ಬಿಡುಗಡೆಯಾಗಿದೆ. ಬಿಡುಗಡೆಯಾದ ಚಿತ್ರಮಂದಿರಗಳಲ್ಲೆಲ್ಲ ವಿಷ್ಣು ಕಟೌಟ್ ಗೆ ಕ್ಷೀರಾಭಿಷೇಕ, ಕಿವಿಗಡಚಿಕ್ಕುವ ಪಟಾಕಿಗಳ ಸದ್ದು, ಮುಗಿಲು ಮುಟ್ಟಿದ ಅಭಿಮಾನಿಗಳ ಜೈಕಾರ ಮತ್ತು ಎಲ್ಲೆಡೆ ಹರ್ಷದ ಹೊನಲು.
ವಿಷ್ಣು ಅವರ ಮರಣದ ನಂತರ ಬಿಡುಗಡೆಯಾಗಿರುವ ಎರಡನೇ ಮತ್ತು ಭಾರೀ ನಿರೀಕ್ಷೆಯ ಚಿತ್ರ. ಕೆಲ ದಿನಗಳ ಹಿಂದೆ ಬಿಡುಗಡೆಯಾದ ಸ್ಕೂಲ್ ಮಾಸ್ಟರ್ ನೆಲಕಚ್ಚಿದ್ದನ್ನು ಮರೆತು ಆಪ್ತರಕ್ಷಕಕ್ಕೆ ಜನ ಮುಗಿಬಿದ್ದಿದ್ದಾರೆ. ಒಂದರ್ಥದಲ್ಲಿ ಪ್ರೇಕ್ಷಕರೇ ನಿಜವಾದ ಆಪ್ತರಕ್ಷಕರು ನಿರ್ಮಾಪಕರಿಗೆ. ಬಾಕ್ಸ್ ಆಫೀಸಿನಲ್ಲಿ ಚಿತ್ರ ಕೊಳ್ಳೆ ಹೊಡೆಯುವುದೆ? ಕಾಲವೇ ಉತ್ತರಿಸಲಿದೆ.
-
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ












Click it and Unblock the Notifications