ಗೌಡರಿಂದ ಯಡ್ಡಿ ಮುಖಕ್ಕೆ ಮಂಗಳಾರತಿ
ಬೆಂಗಳೂರು(ಹೆಮ್ಮಿಗೆಪುರ),
ಫೆ. 16 : ಯಡಿಯೂರಪ್ಪ ಒಬ್ಬ ಅಯೋಗ್ಯ ರಾಜಕಾರಣಿ. ಅಶೋಕ್ ಖೇಣಿ ಭೂಗತ ದೊರೆ ದಾವೂದ್ ಇಬ್ರಾಹಿಂಗಿಂತಲೂ ದೊಡ್ಡ ಮಟ್ಟದ ಮೋಸಗಾರ. ನೈಸ್ ವಿವಾದಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ದೇವೇಗೌಡ ಅವರ ನುಡಿ ಮುತ್ತುಗಳು. id="toptextpromo">ಬೆಂಗಳೂರು
ಗ್ರಾಮಾಂತರ ಜಿಲ್ಲೆಯ ಹೆಮ್ಮಿಗೆಪುರದಲ್ಲಿ ಏರ್ಪಡಿಸಿದ್ದ ರೈತ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಗೌಡರು. ಯಥಾ ಪ್ರಕಾರ ತಮ್ಮ ಆರೋಪ, ಬೈಗುಳಗಳ ಸುರಿಮಳೆಯನ್ನು ಸುರಿಸಿದರು. ಮಾನಗೇಡಿ ಸರಕಾರಕ್ಕೆ ಏನಾದರು ರೈತರ ಬಗ್ಗೆ ಕಾಳಜಿ ಇದೆಯೇ, ಕೇಡಿ ಖೇಣಿ ಜೊತೆಗೆ ಸೇರಿಕೊಂಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. id='are-slot-1' class='oiad oi-axt oiadv'> id='top-searched-articles'>ನೈಸ್
ರಸ್ತೆ ಯೋಜನೆಯಲ್ಲಿ ಜಗತ್ತಿನಲ್ಲಿ ಎಲ್ಲಿ ಇರದ ವಂಚನೆ ಇದೆ. ರಸ್ತೆಗೆ ಬೇಕಿರದ 1,71 ಲಕ್ಷ ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲು ಖೇಣಿ ಮುಂದಾಗಿದ್ದಾನೆ. ಅದು ಹೇಗೆ ವಶಪಡಿಸಿಕೊಳ್ಳತ್ತಾನೋ ನಾನು ನೋಡುತ್ತೇನೆ. ನನಗೀಗ 77 ವರ್ಷ. ನನ್ನ ಉಸಿರಿರುವವರೆಗೂ ಹೋರಾಟ ನಿಲ್ಲಿಸುವುದಿಲ್ಲ. ಜೈಲಿಗೆ ಹಾಕಿದರೂ ಸರಿ, ರೈತರ ಪರ ನಡೆಸುತ್ತಿರುವ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಗೌಡರು ಸ್ಪಷ್ಟಪಡಿಸಿದರು.











Click it and Unblock the Notifications