ಕೋಮುಗಲಭೆ ನಡೆದರೆ ಸರಕಾರವೇ ಹೊಣೆ
ಕಾರ್ಕಳ,
ಫೆ. 15 : ರಾಜ್ಯದ ಯಾವುದೇ ಮೂಲೆಯಲ್ಲಿ ಕೋಮು ಗಲಭೆಗಳು ನಡೆದರೂ ಅದಕ್ಕೆ ರಾಜ್ಯ ಸರಕಾರವೇ ಹೊಣೆ ಎಂದು ಕೇಂದ್ರದ ಕಾನೂನು ಸಚಿವ ಎಂ ವೀರಪ್ಪ ಮೊಯ್ಲಿ ಹೇಳಿದರು. id="toptextpromo">ಪಟ್ಟಣದಲ್ಲಿ
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರಕಾರ ಕೋಮುಗಲಭೆ ನಿಗ್ರಹ ಕಾಯ್ದೆಯನ್ನು ಜಾರಿಗೆ ತಂದಿದ್ದರೂ ರಾಜ್ಯದಲ್ಲಿ ಚರ್ಚ್ ಮೇಲೆ ದಾಳಿ ನಡೆಯುತ್ತಿರುವ ಖಂಡನೀಯ ಕೆಲಸ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಕೋಟೇಶ್ವರ ಬಳಿಯ ಬ್ರೋಟೋ ಚರ್ಚ್ ಮೇಲೆ ದಾಳಿ ನಡೆಸಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕು ಎಂದು ಸರಕಾರವನ್ನು ಸೂಚನೆ ನೀಡಿದ ಅವರು, ಕೋಮು ಗಲಭೆ ತಡೆಯಲು ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು. id='are-slot-1' class='oiad oi-axt oiadv'> id='top-searched-articles'>ದೇಶದ
ನ್ಯಾಯಾಲಯಗಳಲ್ಲಿ ಎಲ್ಲ ಪ್ರಕರಣಗಳನ್ನು ದಾಖಲಾದ ದಿನದಿಂದ ಮೂರು ವರ್ಷದೊಳಗೆ ಇತ್ಯರ್ಥಪಡಿಸುವ ವ್ಯವಸ್ಥೆ ಕಲ್ಪಿಸಲು ಕೇಂದ್ರ ಸರಕಾರ ನಿರ್ಧರಿಸಿದೆ ಎಂದರು. ದೇಶದಲ್ಲಿ ಜನರು ಹಸಿವೆಯಿಂದಸಾಬಾರದು ಎಂದು ದೃಷ್ಟಿಯಿಂದ ಆಹಾರ ಭದ್ರತೆ ಶಾಸನ ರೂಪಿಸಲಾಗಿದೆ. ಬಡತನ ರೇಖೆಯ ಪಟ್ಟಿಯಲ್ಲಿರುವ ಪ್ರತಿ ಕುಟುಂಬಕ್ಕೆ 25 ಕೆಜಿ ಆಹಾರ ಧಾನ್ಯಗಳನ್ನು 3 ರುಪಾಯಿ ಕೆಜಿ ವಿತರಿಸುವ ವ್ಯವಸ್ಥೆ ಮಾಡಲಾಗಿದೆ ಮೊಯ್ಲಿ ವಿವರಿಸಿದರು.











Click it and Unblock the Notifications