ಪುಣೆ ಸ್ಫೋಟ: ಭದ್ರತಾ ವೈಫಲ್ಯವಿಲ್ಲ, ಚಿದಂಬರಂ
ಪುಣೆ,
ಫೆ.14: ಇಲ್ಲಿನ ಓಶೋ ಆಶ್ರಮ ಬಳಿಯ ಜರ್ಮನ್ ಬೇಕರಿ ಬಳಿ ಸಂಭವಿಸಿದ ಬಾಂಬ್ ಸ್ಫೋಟ ನಡೆದ ಸ್ಥಳಕ್ಕೆ ಕೇಂದ್ರ ಗೃಹ ಸಚಿವ ಪಿ ಚಿದಂಬರಂ ಅವರು ಭಾನುವಾರ (ಫೆ.14) ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡುತ್ತಾ, ಘಟನೆಯ ಬಗ್ಗೆ ಭಯೋತ್ಪಾದಕ ನಿಗ್ರಹಾ ದಳ ತನಿಖೆ ನಡೆಸುತ್ತಿದೆ ಎಂದು ಪ್ರತಿಕ್ರಿಯಿಸಿದರು. id="toptextpromo">ಶನಿವಾರ
ನಡೆದ ಪ್ರಬಲ ಬಾಂಬ್ ಸ್ಫೋಟಕ್ಕೆ ಕನಿಷ್ಠ ಒಂಬತ್ತು ಮಂದಿ ಸಾವಪ್ಪಿದ್ದು 33 ಮಂದಿ ಗಾಯಗೊಂಡಿದ್ದರು. ಗಾಯಗೊಂಡವರಲ್ಲಿ ಕೆಲವರ ಪರಿಸ್ಥಿತಿ ಚಿಂತಾಜನಕವಾಗಿದೆ. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪಿ ಚಿದಂಬರಂ, ಬಾಂಬ್ ಸ್ಫೋಟ ಘಟನೆ ನಡೆದದ್ದು ದುರದೃಷ್ಟಕರ ಸಂಗತಿ. ಆದರೆ ಇದರಲ್ಲಿ ಯಾವುದೇ ಭದ್ರತಾ ವೈಫಲ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. id='are-slot-1' class='oiad oi-axt oiadv'> id='top-searched-articles'>ಭದ್ರತಾ
ವೈಫಲ್ಯ ಇದೆಯೇ ಇಲ್ಲವೆ ಎಂಬ ಅಂಶ ತನಿಖೆಯಿಂದ ದೃಢಪಡುತ್ತದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಅಶೋಕ್ ಚವಾಣ್ ತಿಳಿಸಿದರು. ಮೃತರ ಕುಟುಂಬಕ್ಕೆ ತಲಾ ರು.5 ಲಕ್ಷ ಪರಿಹಾರ ಧನ ನೀಡುತ್ತಿರುವುದಾಗಿ ಸರಕಾರ ಘೋಷಿಸಿದೆ.











Click it and Unblock the Notifications