ಶ್ರೀರಾಮಸೇನೆ ಗೂಂಡಾಗಿರಿಗೆ ಸಿದ್ದು ಕಿಡಿ

ಸಮಾರಂಭವೊಂದರಲ್ಲಿ ಭಾಗವಹಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಮಸೇನೆ ಪ್ರೇಮಿಗಳ ದಿನಾಚರಣೆ ವಿರೋಧಿಸುವ ಹೆಸರಿನಲ್ಲಿ ಗೊಂಡಾಗಿರಿ ನಡೆಸುತ್ತಿದೆ. ಆದರೆ, ಅವರ ವಿರುದ್ಧ ಕ್ರಮಕೈಗೊಳ್ಳಲು ಸರಕಾರ ಮೀನಮೇಷ ಎಣಿಸುತ್ತಿದೆ ಎಂದು ಹರಿಹಾಯ್ದರು. ಸಂಘ ಪರಿವಾರದ ಸಂಘಟನೆಗಳಿಗೆ ಈ ಸರಕಾರ ಅವಧಿಯಲ್ಲಿ ಏನು ಬೇಕಾದರೂ ಮಾಡಬಹುದು ಎಂಬ ಭಾವನೆ ಬೆಳೆದುಬಿಟ್ಟಿದೆ. ಇದಕ್ಕೆ ಸರಕಾರವೂ ಸೌಮ್ಯ ಧೋರಣೆ ತಾಳಿದ್ದು ಕಾರಣವಾಗಿದೆ ಎಂದು ಟೀಕಿಸಿದರು.












Click it and Unblock the Notifications