ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಟಿ ಬದನೆ ನಿಷೇಧಕ್ಕೆ ಕಿರಣ್ ಅಸಮಾಧಾನ

By Mrutyunjaya Kalmat
|
Google Oneindia Kannada News

ಲಂಡನ್, ಫೆ. 12 : ಕುಲಾಂತರಿ ಬದನೆಗೆ ಸಂಬಂಧಿಸಿದಂತೆ ರಾಜಕೀಯ ಹಾಗೂ ಒತ್ತಡವನ್ನು ಬದಿಗಿರಿಸಿ ಪಾರದರ್ಶಕ ತೀರ್ಮಾನ ಕೈಗೊಳ್ಳಬೇಕು ಎಂದು ಈ ಹಿಂದೆ ಮನವಿ ಮಾಡಿಕೊಂಡಿದ್ದ ಬಯೋಕಾನ್ ಕಂಪನಿಯ ಮುಖ್ಯಸ್ಥೆ ಕಿರಣ್ ಮುಜಮ್ ದಾರ್ ಶಾ ಇದೀಗ ತಮ್ಮ ವರಸೆ ಬದಲಾಯಿಸಿದ್ದು, ಬಿಟಿ ಬದನೆ ನಿಷೇಧದಿಂದ ಬಿಟಿ ಕಂಪನಿಗಳಿಗೆ ತಪ್ಪು ಸಂದೇಶವನ್ನು ಸರಕಾರ ರವಾನಿಸಿದೆ ಎಂದು ಆರೋಪಿಸಿದ್ದಾರೆ.

ಕಳೆದ ಬುಧವಾರ ಕೇಂದ್ರ ಪರಿಸರ ಖಾತೆ ಸಚಿವ ಜೈರಾಮ್ ರಮೇಶ್ ಅವರು ಬಿಟಿ ಬದನೆಗೆ ಸಂಬಂಧಿಸಿದಂತೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಸದ್ಯಕ್ಕೆ ಭಾರತದಲ್ಲಿ ಬಿಟಿ ಬದನೆಗೆ ಅವಕಾಶವಿಲ್ಲ ನೀಡುವುದಿಲ್ಲ ಎಂದು ಹೇಳಿದ್ದಾರೆ. ಸರಕಾರದ ನಿರ್ಧಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕಿರಣ್ ಮುಜಮ್ ದಾರ್ ಶಾ ಅವರು, ಸರಕಾರ ಕೆಲ ಸರಕಾರೇತರ ಸಂಸ್ಥೆಗಳ ಮತ್ತು ಪರಿಸರವಾದಿಗಳ ಒತ್ತಡಕ್ಕೆ ಮಣಿದು ಬಿಟಿ ಬದನೆಯನ್ನು ನಿಷೇಧಿಸುವ ನಿರ್ಧಾರ ಕೈಗೊಂಡಿದೆ. ಸರಕಾರದ ಈ ನಿರ್ಧಾರ ಬಿಟಿ ಕಂಪನಿಗಳಿಗೆ ಮಾರಕವಾಗುವುದರಲ್ಲಿ ಸಂಶಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಟಿ ಹತ್ತಿಗೂ ಆರಂಭದಲ್ಲಿ ಭಾರಿ ವಿರೋಧ ವ್ಯಕ್ತವಾಯಿತು. ನಂತರ ಎಲ್ಲವೂ ಸುಲಲಿತವಾಯಿತು. ಇಂತಹ ನಿರ್ಧಾರಗಳನ್ನು ಕೈಗೊಳ್ಳುವಾಗ ಪರ ವಿರೋಧಗಳು ಸಹಜ. ಆದರೆ, ಸರಕಾರ ಈ ವಿಷಯದಲ್ಲಿ ಆತುರದ ನಿರ್ಧಾರ ಕೈಗೊಂಡಿದ್ದು ಮಾತ್ರ ಸತ್ಯ. ಮುಂದಿನ ದಿನಗಳಲ್ಲಾದರೂ ಬಿಟಿ ಬದನೆಯ ಬಗ್ಗೆ ವೈಜ್ಞಾನಿಕ ಸಂಶೋಧನೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಶಾ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X