ನೃಪತುಂಗ ಬೆಟ್ಟದಲ್ಲಿ ಕನ್ನಡ ಚಿಂತನೆ - ಸಂಸ್ಕೃತಿ ಹಬ್ಬ

ಈ ಕಾರ್ಯಕ್ರಮಕ್ಕೆ ಕರ್ನಾಟಕ ವಿಧಾನ ಪರಿಷತ್ ಸಭಾಪತಿ ವೀರಣ್ಣ ಮತ್ತಿಕಟ್ಟಿ ಅವರು ಗೌರವಾನ್ವಿತ ಮುಖ್ಯ ಅತಿಥಿಗಳಗಿ ಆಗಮಿಸಲಿದ್ದು , ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅವರು ಈ ಹಬ್ಬವನ್ನು ಉದ್ಘಾಟಿಸಲಿದ್ದಾರೆ . ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು ವಹಿಸಲಿದ್ದಾರೆ.
ರಾಜ್ಯ ಗ್ರಾಮೀಣಾಭಿವೃಧ್ಧಿ ಸಚಿವರಾದ ಜಗದೀಶ ಶೆಟ್ಟರ್, ಅವರು ಮುಖ್ಯ ಅತಿಥಿಗಳಾಗಿರುತ್ತಾರೆ. ಸಮಾರಂಭದಲ್ಲಿ ಜಿಲ್ಲೆಯ ಶಾಸಕರು , ಸಂಸದರು , ನಿಗಮ ಮಂಡಳಿಗಳ ಅಧ್ಯಕ್ಷರು ಉಪಸ್ಥಿತರಿರುತ್ತಾರೆ . ಜಿಲ್ಲಾ ಆಡಳಿತ , ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನೃಪತುಂಗ ಬೆಟ್ಟ ವಾಯುವಿಹಾರಿಗಳ ಸಂಘದ ಸಹಯೋಗದಲ್ಲಿ ನಡೆಯುವ ಈ ಕಾರ್ಯಕ್ರಮದ ವಿವರಗಳು ಇಂತಿವೆ:
ಅಂದು ಸಂಜೆ 5 ಗಂಟೆಗೆ ಬಾಲಚಂದ್ರ ನಾಕೋಡ್ ಹಾಗೂ ಅವರ ತಂಡದಿಂದ ಗಾಯನ
5.30 ಗಂಟೆಗೆ ಉದ್ಘಾಟನಾ ಸಮಾರಂಭ ;
6.15 ಕ್ಕೆ ಶಶಿಧರ ಕೋಟೆ ಹಾಗೂ ತಂಡದವರ ಸುಗಮ ಸಂಗೀತ ;
7ಗಂಟೆಗೆ ಸಂಧ್ಯಾ ಕೇಶವರಾವ್ ಹಾಗೂ ತಂಡದವರಿಂದ ನೃತ್ಯ ವೈಭವ
ಸಂಜೆ 7.30 ರಿಂದ ಜರುಗುವ ಜನಪದ ವೈಭವದಲ್ಲಿ ಡೊಳ್ಳು ಕುಣಿತ , ಕಂಸಾಳೆ , ಪೂಜಾ ಕುಣಿತ , ತಮಟೆ , ಜಗ್ಗಲಿಗಿ , ಬ್ಯಾಡರವೇಗ ಹಾಗೂ ಜೋಗತಿ ನೃತ್ಯಗಳು ಕಲಾವಿದರು ತಮ್ಮ ಕಲೆಯನ್ನು ಪ್ರದರ್ಶಿಸಲಿದ್ದಾರೆ












Click it and Unblock the Notifications