ರಾಷ್ಟ್ರಪತಿ ಗಂಡನಿಂದ ಅಕ್ರಮ ಭೂಕಬಳಿಕೆ

ದೇವಿಸಿಂಗ್ ಶೇಖಾವತ್ ಕುಟುಂಬದಿಂದ ತಮ್ಮ ಜಮೀನು ಒತ್ತುವರಿಯಾಗಿದೆ ಎಂದು ಕಿಶೋರ್ ಅನ್ಸಾಥ್ ಎಂಬಾತ ಜೂನ್ 2009ರಲ್ಲಿ ದೂರು ಸಲ್ಲಿಸಿದ್ದ. ಅರ್ಜಿಯ ವಿಚಾರಣೆಯ ಹಿನ್ನಲೆಯಲ್ಲಿ ಜಮೀನು ಖಾತೆ ಕಿಶೋರ್ ಹೆಸರಿಗೆ ಮಾಡಿಸಿ ಕೊಡಬೇಕೆಂದು ಪ್ರತಿಭಾ ಪಾಟೀಲ್ ಪತಿ ಶೇಖಾವತ್ ಗೆ ಉಪ ವಿಭಾಗಾಧಿಕಾರಿ ಡಿಸೆಂಬರ್ 7ರಂದು ಆದೇಶ ಹೊರಡಿಸಿದ್ದರು. ಆದೇಶದ ಪ್ರತಿ ಕೆಲವು ದಿನಗಳ ಹಿಂದೆ ಕಿಶೋರ್ ಕೈ ಸೇರಿತ್ತು.
ವಿಡಿಯೋ: ರಾಷ್ಟ್ರಪತಿ ಗಂಡನ ಭೂಕಬಳಿಕೆ ಪ್ರಕರಣ
ತಮ್ಮ ಕುಟುಂಬದ ವಿರುದ್ದ ಕೇಳಿ ಬಂದಿರುವ ಭೂ ಕಬಳಿಕೆಯ ಆರೋಪವನ್ನು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಪುತ್ರ ಶಾಸಕ ರಾಜೇಂದ್ರ ಶೇಖಾವತ್ ತಳ್ಳಿ ಹಾಕಿದ್ದಾರೆ. ಇದೊಂದು ತುಂಬಾ ಹಳೆಯ ಪ್ರಕರಣ. ಇದಕ್ಕೆ ಸಂಬಂಧಿಸಿದಂತೆ ನಮ್ಮ ಅಜ್ಜ ದಾವೆ ಹೂಡಿದ್ದರು. ಹಳೆಯ ಪ್ರಕರಣವಾಗಿರುವುದರಿಂದ ಇದಕ್ಕೆ ಸಂಬಂಧಿಸಿದ ದಾಖಲೆಗಳು ನಮ್ಮ ಬಳಿಯಿಲ್ಲ ಎಂದು ಆರೋಪವನ್ನು ನಿರಾಕರಿಸಿದ್ದಾರೆ.












Click it and Unblock the Notifications