ನೇಪಾಳಿ ದಂಪತಿ ಭೀಕರ ಕೊಲೆ

ಮೃತರನ್ನು ಬೆಳ್ಳಂದೂರು ನಿವಾಸಿಗಳಾದ ಜಾನಕಿ (25) ಹಾಗೂ ಆಕೆಯ ಪತಿ ಅಮೃತ್ ಎಂದು ಗುರುತಿಸಲಾಗಿದೆ. ಜಾನಕಿ ಸರ್ಜಾಪುರ ರಸ್ತೆಯ ಶೋಭಾ ಗಾರ್ಲೆ ಅಪಾರ್ಟ್‌ಮೆಂಟ್‌ನ ನಿವಾಸಿ ಸುನಿಲ್ ಗಿರಿಧರ್ ಎಂಬುವರ ಮನೆಯಲ್ಲಿ ಕಳೆದ 5 ವರ್ಷದಿಂದ ಕೆಲಸ ಮಾಡುತ್ತಿದ್ದರು. ಅಮೃತ್ ಶವ ಅಗರ-ಜಕ್ಕಸಂದ್ರ ರಸ್ತೆಯ ಸರ್ಜಾಪುರ ಕೆರೆ ಬಳಿ ಪತ್ತೆಯಾಗಿದ್ದರೆ, ಜಾನಕಿ ಶವ ಬೆಳ್ಳಂದೂರಿನ ಮನೆಯಲ್ಲಿ ಸಿಕ್ಕಿದೆ.
ಇಬ್ಬರ ಕತ್ತು ಕತ್ತರಿಸಿ ದೇಹಕ್ಕೆ ತಿವಿದು ಸಾಯಿಸಲಾಗಿದೆ. ಈ ಕೃತ್ಯಕ್ಕೆ ಕಾರಣ ತಿಳಿದು ಬಂದಿಲ್ಲ. ಮಧ್ಯಾಹ್ನ 2 ಗಂಟೆ ಸುಮಾರಿಗೆ ಶ್ರೀಧರ್ ಎಂಬುವರು ಎಚ್‌ಎಸ್ಆರ್ ಲೇಔಟ್ ಪೊಲೀಸ್ ಠಾಣೆಗೆ ಕರೆ ಮಾಡಿ ಸರ್ಜಾಪುರ ಕೆರೆ ಬಳಿ ಯುವಕನ ಶವ ಪತ್ತೆಯಾಗಿದೆ ಎಂಬ ಮಾಹಿತಿ ನೀಡಿದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲಿಸಿದಾಗ ಶವದ ಬಳಿ ಕಾರೊಂದು ಪತ್ತೆಯಾಯಿತು.
ಇದರ ನಂಬರ್ ಆಧಾರದ ಮೇಲೆ ತನಿಖೆಗೆ ಇಳಿದ ಪೊಲೀಸರು ಕಾರು ಸುನಿಲ್ ಗಿರಿಧರ್‌ಗೆ ಸೇರಿದ್ದು ಎಂಬುದನ್ನು ಪತ್ತೆ ಹಚ್ಚಿದರು. ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಈ ಕಾರನ್ನು ಕೆಲ ದಿನಗಳ ಹಿಂದಷ್ಟೆ ಮನೆಕೆಲಸಕ್ಕೆ ಇದ್ದ ಜಾನಕಿ ಎಂಬುವರಿಗೆ ಮಾರಿದ್ದೆ ಎಂದು ತಿಳಿಸಿದರು. ಅವರಿಗೆ ಮೃತ ವ್ಯಕ್ತಿಯ ಫೋಟೋ ತೋರಿದಾಗ ಆತ ಜಾನಕಿಯ ಪತಿ ಅಮೃತ್ ಎಂದು ಗುರುತಿಸಿದ. ತಕ್ಷಣ ಜಾನಕಿಯ ಮನೆಗೆ ದೌಡಾಯಿಸಿದಾಗ ಅಲ್ಲಿ ಆಕೆ ಕೊಲೆಯಾಗಿ ಬಿದ್ದಿದ್ದಳು. ಇಬ್ಬರನ್ನೂ ಕೊಲೆ ಮಾಡಿದ ದುಷ್ಕರ್ಮಿ ಒಬ್ಬನೇ ಆಗಿದ್ದು, ತನಿಖೆಯ ಜಾಡು ತಪ್ಪಿಸುವ ಉದ್ದೇಶದಿಂದ ಅಮೃತ್‌ನನ್ನು ಸರ್ಜಾಪುರ ಕೆರೆಯಲ್ಲಿ ಬಿಸಾಕಿರಬೇಕೆಂದು ಪೊಲೀಸರು
ಶಂಕಿಸಿದ್ದಾರೆ.












Click it and Unblock the Notifications