ಪೊಲೀಸರಿಗೆ ಹೆದರಿ ನಾಲಿಗೆ ಕತ್ತರಿಸಿಕೊಂಡ ಭೂಪ
ಭುವನೇಶ್ವರ,
ಫೆ.7: ಬೆಲೆಬಾಳುವ ವಸ್ತುಗಳನ್ನು ಕದ್ದಿದ್ದಾನೆಂದು ಜಮೀನ್ದಾರರೊಬ್ಬರು ಪೊಲೀಸರಿಗೆ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ನಾಲಿಗೆಯನ್ನು ಕತ್ತರಿಸಿಕೊಂಡ ಘಟನೆ ಒರಿಸ್ಸಾದ ಕಟಕ್ ನಗರದಲ್ಲಿ ನಡೆದಿದೆ. id="toptextpromo">ನಾಲಿಗೆಯನ್ನು
ಕತ್ತರಿಸಿಕೊಂಡಾತನ ಹೆಸರು ರಾಜು ಮೊಹಂತಿ. ಪೊಲೀಸರು ತನ್ನ ಮೇಲೆ ಕ್ರಮ ಕೈಗೊಳ್ಳುತ್ತಾರೆ ಎಂಬ ಭಯದಿಂದ ಮೊಹಂತಿ ಶುಕ್ರವಾರ (ಫೆ.6) ರಾತ್ರಿ ತನ್ನ ನಾಲಿಗೆಯನ್ನು ಕತ್ತರಿಸಿಕೊಂಡಿದ್ದಾನೆ. ಜಮೀನ್ದಾರರೊಬ್ಬರು ದೂರು ಕೊಟ್ಟ ಹಿನ್ನೆಲೆಯಲ್ಲಿ ಪೊಲೀಸರು ಈತನನ್ನು ಬಂಧಿಸಲು ಅವರ ಮನೆಗೆ ಹೋಗಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. id='are-slot-1' class='oiad oi-axt oiadv'> id='top-searched-articles'>ಮೊಹಂತಿ
ಮನೆಗೆ ಪೊಲೀಸರು ಬಂದ ಕೂಡಲೆ ಬಾಗಿಲು ಹಾಕಿಕೊಂಡ ಈತ ತರಕಾರಿ ಹೆಚ್ಚುವ ಚಾಕುವಿನಿಂದ ತನ್ನ ನಾಲಿಗೆಯನ್ನು ಕತ್ತರಿಸಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಬಳಿಕ ಆತನನ್ನು ಚಿಕಿತ್ಸೆಗಾಗಿ ತಕ್ಷಣ ಎಸ್ ಸಿಬಿ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ಚಿಕಿತ್ಸೆ ನೀಡುತ್ತಿದ್ದು ಮೊಹಂತಿ ಚೇತರಿಸಿಕೊಳ್ಳುತ್ತಿದ್ದಾರೆ.











Click it and Unblock the Notifications