ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಇಎಸ್ ವೇಷ ಧರಿಸಿ ಕರವೇ ಹೋರಾಟ!

By Mahesh
|
Google Oneindia Kannada News

Narayana Gowda
ಬೆಳಗಾವಿ, ಫೆ. 5:ಮರಾಠಿಗರ ಸೀಮಾ ಪರಿಷತ್ ಸಮ್ಮೇಳನಕ್ಕೆ ಕರವೇ ಭಾರಿ ಪ್ರತಿರೋಧ ತೋರಿದೆ. ಇಂದು ಲೇಲೆ ಮೈದಾನದಲ್ಲಿ ನಡೆದಿದ್ದ ಸಮ್ಮೇಳನಕ್ಕೆ ನುಗ್ಗಿದ್ದ ಕರವೇ ಕಾರ್ಯಕರ್ತರಿಗೂ ಎಂಇಎಸ್ ಕಾರ್ಯಕರ್ತರಿಗೂ ಮಾರಾಮಾರಿ ನಡೆದಿದೆ. ಕಲ್ಲು ತೂರಾಟ ನಡೆದಿದ್ದು, ಪೊಲೀಸರು ಲಾಠಿ ಚಾರ್ಚ್ ಮಾಡಿ, ಕಾರ್ಯಕರ್ತರನ್ನು ಚದುರಿಸಿದ್ದಾರೆ.

ಮರಾಠಿ ಧ್ವಜ ಹಾರಿಸುವುದು. ಕನ್ನಡಿಗರು ಪಾಕ್ ಸೈನಿಕರಿಗಿಂತ ಕ್ರೂರರು ಎನ್ನುವುದು. ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದ್ದು ಎಂದು ಪದೇ ಪದೇ ವಿವಿಧ ಹೇಳಿಕೆ ನೀಡಿ ಜನರ ಭಾವನೆಗಳನ್ನು ಕೆರಳಿಸುವುದು ಇವೇ ಮುಂತಾದ ದುಷ್ಕೃತ್ಯಗಳಲ್ಲಿ ಎಂಇಎಸ್ ತೊಡಗಿದೆ. ಇದನ್ನು ಕರವೇ ಪ್ರತಿಭಟಿಸುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ನಮ್ಮ ವಿರೋಧವಿಲ್ಲ .ಆದರೆ, ನಮ್ಮ ನೆಲಕ್ಕೆ ಬಂದು ನಮ್ಮವರ ಕೈ ಕತ್ತರಿಸುವುದಾಗಿ ಭಾಷಣ ಮಾಡಿದರೆ ಸಹಿಸಿಕೊಂಡು ಇರಲು ಸಾಧ್ಯವಿಲ್ಲ ಎಂದರು.

ಒಟ್ಟು 400 ಕ್ಕೂ ಅಧಿಕ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಪರಿಸ್ಥಿತಿ ಹತೋಟಿಯಲ್ಲಿದೆ. ಕರವೇ ಕಾರ್ಯಕರ್ತರು ಎಂಇಎಸ್ ಸೀಮಾ ಪರಿಷತ್ ಸದಸ್ಯರ ವೇಷ ಧರಿಸಿ ಬಂದು, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅಡ್ಡಿ ಮಾಡಿದರು. ನಂತರ ಪ್ರತಿಭಟನಾಕಾರರನ್ನು ಬಂಧಿಸಲಾಯಿತು ಎಂದು ಪೊಲೀಸ್ ಅಧಿಕಾರಿಗಳು ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X