ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ಪಿಯಿಂದ ಅಮರ್, ಜಯಪ್ರದಾಗೆ ಕೊಕ್

By Mahesh
|
Google Oneindia Kannada News

Jayaprada
ನವದೆಹಲಿ, ಫೆ. 2: ಆಮರ್ ಸಿಂಗ್, ಜಯಪ್ರದಾ ಅವರನ್ನು ಸಮಾಜವಾದಿ ಪಕ್ಷದಿಂದ ಉಚ್ಚಾಟಿಸಲಾಗಿದೆ. ಇತ್ತೀಚೆಗಷ್ಟೇ ಪಕ್ಷದ ವರಿಷ್ಠ ಸ್ಥಾನದಿಂದ ಕೆಳಗಿಳಿದಿದ್ದ ಅಮರ್ ಅವರಿಗೆ ಜಯಪ್ರದಾ ಅವರು ಬೆಂಬಲ ನೀಡಿದ್ದಕ್ಕೆ ಬೆಲೆ ತೆತ್ತಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿ ಗೇಟ್ ಪಾಸ್ ನೀಡಲಾಗಿದೆ ಎಂದು ಎಸ್ಪಿಯ ಪ್ರಧಾನ ಕಾರ್ಯದರ್ಶಿ ಮೋಹನ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದರು. ನಿನ್ನೆಯಷ್ಟೇ ಕರ್ನಾಟಕದ ಕುಕ್ಕೆ ಶ್ರೀಸುಬ್ರಮಣ್ಯ ದೇಗುಲದಲ್ಲಿ ಕಾಣಿಸಿಕೊಂಡಿದ್ದ ಜಯಪ್ರದಾ ಅವರು ಆಶ್ಲೇಷ ಬಲಿ ಪೂಜೆ ನಡೆಸಿ ಉಜ್ವಲ ಭವಿಷ್ಯಕ್ಕಾಗಿ ಪ್ರಾರ್ಥಿಸಿದ್ದರು.

ರಾಜ್ಯಸಭಾ ಸದಸ್ಯರಾದ ಅಮರ್ ಸಿಂಗ್ ಹಾಗೂ ಸಂಸದೆ ಜಯಪ್ರದಾ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವ ದಿಂದಲೂ ಮುಕ್ತ ಗೊಳಿಸಲಾಗಿದೆ. ಇದರೊಂದಿಗೆ ಎರಡು ದಶಕಕ್ಕೂ ಅಧಿಕ ಕಾಲದ ಅಮರ್ ಸಿಂಗ್, ಮುಲಾಯಂ ಸಿಂಗ್ ಅವರ ಸ್ನೇಹ ಸೌಧ ಮುರಿದು ಬಿದ್ದಿದೆ ಎನ್ನಬಹುದು. ಈ ಇಬ್ಬರು ಹಿರಿಯ ನಾಯಕರಲ್ಲದೆ ನಾಲ್ಕು ಜನ ಎಂಎಲ್ ಎ ಗಳನ್ನು ಕೂಡ ಪಕ್ಷದಿಂದ ಹೊರದಬ್ಬಲಾಗಿದೆ.

ಜನವರಿ 6 ರಂದು ಆನಾರೋಗ್ಯದ ಕಾರಣ ಕೊಟ್ಟು ಪಕ್ಷದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಅಮರ್ ಸಿಂಗ್ ರಾಜೀನಾಮೆ ನೀಡಿದ್ದರು. ನಂತರ ಬಿಎಸ್ ಪಿಯ ಮಾಯಾವತಿಯ ಅಭಿವೃದ್ಧಿ ಕಾರ್ಯಗಳ ಕುರಿತು ಮೆಚ್ಚುಗೆ ಮಾತನಾಡಿದ್ದು ಅವರಿಗೆ ಮುಳುವಾಯಿತು ಎನ್ನಲಾಗಿದೆ. ರಾಜ್ಯಸಭಾ ಸದಸ್ಯರಾಗಿ ಅಮರ್ ಸಿಂಗ್ ಅವರಿಗೆ ಇನ್ನೂ ಒಂದು ವರ್ಷ ಕಾಲಾವಧಿಯಿದೆ. 2009ರಲ್ಲಿ ರಾಮಪುರದಿಂದ ಲೋಕಸಭೆ ಆಯ್ಕೆಯಾಗಿರುವ ಜಯಪ್ರದಾ ಅವರಿಗೆ ಇನ್ನೂ 4 ವರ್ಷಗಳ ಕಾಲ ಸಂಸತ್ತಿನ ಬಾಗಿಲು ಮುಕ್ತವಾಗಿರುತ್ತದೆ. ಆದರೆ ಇಬ್ಬರು ತಮ್ಮ ಮುಂದಿನ ರಾಜಕೀಯ ನಡೆಯ ಬಗ್ಗೆ ಪ್ರತಿಕ್ರಿಯಿಸಿಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X