ಸರಕಾರದ ವಿರುದ್ಧ ರಾಜ್ಯಪಾಲರ ಆಕ್ರೋಶ
ಬೆಂಗಳೂರು,
ಫೆ.2 : ಬಿಬಿಎಂಪಿ ಚುನಾವಣೆ ಮುಂದಕ್ಕೆ ಹೋಗಲು ಕಾರಣವಾದ ರಾಜ್ಯ ಸರಕಾರ, ನಗರದ ಅಭಿವೃದ್ಧಿಗೆ ಅಡ್ಡಗಾಲು ಹಾಕಿದೆ ಎಂದು ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಜನ ಪ್ರತಿನಿಧಿಗಳು ಇಲ್ಲದಿರುವುದರಿಂದ ಅಭಿವೃದ್ದಿ ಕಾರ್ಯಗಳು ಸೂಕ್ತ ರೀತಿಯಲ್ಲಿ ನಡೆಯುತ್ತಿಲ್ಲ, ಚುನಾವಣೆ ಮುಂದಕ್ಕೆ ಹೋಗಿ ಅಸ್ಥಿರತೆ ಮುಂದುವರಿದಿದೆ ಎಂದು ರಾಜ್ಯಪಾಲರು ಕಳವಳ ವ್ಯಕ್ತ ಪಡಿಸಿದ್ದಾರೆ. id="toptextpromo">30
ವರ್ಷಗಳ ಹಿಂದೆ ವಕೀಲನಾಗಿ ಬೆಂಗಳೂರಿಗೆ ಬಂದಾಗ ಉದ್ಯಾನ ನಗರಿಯಾಗಿದ್ದ ಅಂದಿನ ಬೆಂಗಳೂರು ಸ್ವಚ್ಛವಾದ ಕೆರೆಗಳಿಂದ ಆವರಿಸಿತ್ತು. ಆದರೆ ಇಂದು ಎಲ್ಲಡೆಯೂ ಕಸ, ಕೆರೆಗಳು ಕೊಳಕಿನಿಂದ ತುಂಬಿ ಹೋಗಿದೆ. ಅಂದು ನಾನು ನೋಡಿದ್ದ ಬೆಂಗಳೂರು ಇದೇನಾ ಎಂಬ ಅನುಮಾನ ಉಂಟಾಗಿದೆ ಎಂದು ರಾಜ್ಯಪಾಲರು ಅಸಮಾಧಾನಗೊಂಡರು. id='are-slot-1' class='oiad oi-axt oiadv'> id='top-searched-articles'>ಈ
ಮಧ್ಯೆ, ಬಿಬಿಎಂಪಿ ಚುನಾವಣಾ ಪರಿಷ್ಕೃತ ಮೀಸಲು ಪಟ್ಟಿ ಸಂಬಂಧ ಹೈಕೋರ್ಟ್, ರಾಜ್ಯ ಸರಕಾರ, ಚುನಾವಣಾ ಆಯೋಗ ಹಾಗೂ ಬಿಬಿಎಂಪಿ ಗೆ ನೋಟಿಸ್ ಜಾರಿ ಮಾಡಿದೆ. ಚುನಾವಣೆ ವೇಳಾಪಟ್ಟಿ ರದ್ದು ಪಡಿಸಿ ಆಯೋಗ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಮಾಜಿ ಮೇಯರ್ ಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಶಕ್ತಿ ಅರ್ಜಿ ವಿಚಾರಣೆ ಯನ್ನು ನ್ಯಾ. ಗೋಪಾಲ ಗೌಡ ಅವರ ಪೀಠ ಮಂಗಳವಾರಕ್ಕೆ ( ಫೆ.2 )ಮುಂದೂಡಿದೆ.











Click it and Unblock the Notifications