ಶಿವಸೇನೆ ವಿರುದ್ದ ರಾಹುಲ್ ಕೆಂಡಾಮಂಡಲ
ನವದೆಹಲಿ
ಫೆ 2 : ಮುಂಬೈ ಮರಾಠಿಗರಿಗೆ ಸೇರಿದ್ದು ಎನ್ನುವ ಶಿವಸೇನೆ ನಿಲುವಿಗೆ ಎಲ್ಲಡೆ ತೀವ್ರ ಪ್ರತಿರೋಧ ವ್ಯಕ್ತವಾಗುತ್ತಿದೆ. ಇದಕ್ಕೆ ಪೂರಕವಾಗಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಶಿವಸೇನೆಯನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. 26 /11 ಮುಂಬೈ ದಾಳಿಯಲ್ಲಿ ಹೋರಾಡಿದ ಕಮಾಂಡೋಗಳು ಉತ್ತರ ಭಾರತೀಯರು ಎನ್ನುವುದು ಶಿವಸೇನೆ ನಾಯಕರಿಗೆ ತಿಳಿದಿರಲಿ ಎಂದು ಹೇಳಿಕೆ ನೀಡಿದ್ದಾರೆ. id="toptextpromo">ಮುಂಬೈ
ದಾಳಿಯ ಸಂದರ್ಭದಲ್ಲಿ ಧೈರ್ಯದಿಂದ ಕಾರ್ಯಾಚರಣೆ ನಡೆಸಿದವರು ದೇಶದ ಬೇರೆ ಬೇರೆ ಭಾಗದಿಂದ ಬಂದ ರಾಷ್ಟ್ರೀಯ ಭದ್ರತಾ ಪಡೆ ( ಎನ್ ಎಸ್ ಜಿ) ಕಮಾಂಡೋಗಳು. ಈ ಕಾರ್ಯಾಚರಣೆಯ ಸಂದರ್ಭದಲ್ಲಿ ಕಮಾಂಡೋಗಳು ಉತ್ತರ, ದಕ್ಷಿಣ ಭಾರತೀಯ, ಮರಾಠಿಗರೆಂದು ಕಾರ್ಯಾಚರಣೆಯಲ್ಲಿ ತೊಡಗಿರಲಿಲ್ಲ. ಕಮಾಂಡೋಗಳಲ್ಲಿ ಹೆಚ್ಚಿನವರು ಉತ್ತರ ಪ್ರದೇಶ ಮತ್ತು ಬಿಹಾರ್ ಮೂಲದವರು. ಮೊದಲು ನಾವೆಲ್ಲಾ ಭಾರತೀಯರು ಎನ್ನುವ ಕನಿಷ್ಠ ಬುದ್ದಿ ಶಿವಸೇನೆ ನಾಯಕರುಗಳಿಗೆ ಬೇಡವೇ ಎಂದು ರಾಹುಲ್ ಕಿಡಿಕಾರಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಬುದ್ಧ್
ಗಯಾ ನಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ರಾಹುಲ್, ಶಿವಸೇನೆ ಜನರಲ್ಲಿ ಭಾಷಾವಾರು ವಿಷಬೀಜವ ಬಿತ್ತುವ ಕೆಲಸವನ್ನು ಕೈ ಬಿಡಲಿ. ಮುಂಬೈ ಎಲ್ಲ ಭಾರತೀಯರಿಗೆ ಸೇರಿದ್ದು, ಸೇನೆ ತನ್ನ ನಿಲುವನ್ನು ಬದಲಿಸದಿದ್ದಲ್ಲಿ ಜನರೇ ಅವರಿಗೆ ಸೂಕ್ತ ಪಾಠ ಕಲಿಸಲಿದ್ದಾರೆ ಎಂದರು.











Click it and Unblock the Notifications