ಡೊಳ್ಳು ಬಡಿದು ದೆಹಲಿ ದಿಲ್ ಗೆದ್ದ ಮಕ್ಕಳು
ಬೆಂಗಳೂರು,
ಫೆ. 1: ಗಣರಾಜ್ಯೋತ್ಸವದ ದಿನದಂದು ನವದೆಹಲಿಯ ರಾಜ್ ಪಥದಲ್ಲಿ ಡೊಳ್ಳು ಬಡಿದು ಅತ್ಯುತ್ತಮ ಪ್ರದರ್ಶನ ಪ್ರಶಸ್ತಿ ಪಡೆದ ಬೆಂಗಳೂರಿನ ಶಾಲಾ ಮಕ್ಕಳು ವಿಜಯೋತ್ಸವದೊಂದಿಗೆ ನಗರಕ್ಕೆ ಹಿಂದುರಿಗಿದ್ದಾರೆ. ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ಯಶವಂತಪುರ ರೈಲ್ವೇ ನಿಲ್ದಾಣಕ್ಕೆ ಆಗಮಿಸಿದ ಶಾಲಾ ಮಕ್ಕಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ ಮುನಿರಾಜಯ್ಯ ಸಂತಸದಿಂದ ಸ್ವಾಗತಿಸಿದರು. id="toptextpromo">ಬೆಂಗಳೂರಿನ
ಆರ್.ವಿ. ಶಾಲೆ, ಜೀವನಭೀಮಾನಗರದ ಸೇಕ್ರೆಡ್ ಹಾರ್ಟ್ ಶಾಲೆ ಹಾಗೂ ಜೀವನಭೀಮಾನಗರದ ಸರಕಾರಿ ಶಾಲೆ-ಈ 3 ಶಾಲೆಗಳಿಂದ ಒಟ್ಟು 160 ಮಕ್ಕಳನ್ನು ಇದಕ್ಕಾಗಿ ಆಯ್ಕೆ ಮಾಡಲಾಗಿತ್ತು.ಇವರಲ್ಲಿ 140 ಹೆಣ್ಣು ಮಕ್ಕಳು. ಎಲ್ಲರೂ 8 ಮತ್ತು 9 ನೇ ತರಗತಿ ಕಲಿಯುತ್ತಿರುವವರು. 3 ತಿಂಗಳು ಕಠಿಣ ಅಭ್ಯಾಸ ಫಲ ಕೊಟ್ಟಿತು ತುಂಬಾ ಸಂತೋಷವಾಗಿದೆ ಎನ್ನುತ್ತಾರೆ ನೃತ್ಯ ಸಂಯೋಜನೆ ಮಾಡಿದ ಬೆಂಗಳೂರಿನ ಸುಜಾತಾ ಮೂರ್ತಿ . id='are-slot-1' class='oiad oi-axt oiadv'> id='top-searched-articles'>ದಕ್ಷಿಣ
ಭಾರತದಿಂದ ಪಥ ಸಂಚಲನದಲ್ಲಿ ಭಾಗವಹಿಸಿದ ಏಕೈಕ ತಂಡ ಎಂಬ ಹೆಗ್ಗಳಿಕೆ ಹೊಂದಿದ್ದ ನಮ್ಮ ಶಾಲಾ ಮಕ್ಕಳ ತಂಡಕ್ಕೆ ಜ.31 ರಂದು ಬೆಳಿಗ್ಗೆ ಅತ್ಯುತ್ತಮ ಪ್ರದರ್ಶನ ನೀಡಿದ ತಂಡ ಎಂದು ಫಲಕ ನೀಡಿ ಗೌರವಿಸಲಾಯಿತು.











Click it and Unblock the Notifications