ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿರುಮಕೂಡಲಿನಲ್ಲಿ ಪೂರ್ಣ ಕುಂಭ ಮೇಳ

By Rajendra
|
Google Oneindia Kannada News

Tirumakudlu Narsipur Kumbha Mela
ಮೈಸೂರು, ಜ.27 : ದಕ್ಷಿಣ ಭಾರತದ ತ್ರಿವೇಣಿ ಸಂಗಮವೆಂದೇ ಗುರುತಿಸಲಾಗಿರುವ ಟಿ ನರಸೀಪುರದಲ್ಲಿ ಎಂಟನೆ ಕುಂಭ ಮೇಳಕ್ಕೆ ಕ್ಷಣಗಣನೆ ಆರಂಭವಾಗಿದೆ. ಜನವರಿ 28 ರಿಂದ 30ರ ವರೆಗೆ ಮೂರೂ ದಿನಗಳ ಧಾರ್ಮಿಕ ವಿಧಿವಿದಾನಗಳು ನೆರವೇರಲಿದೆ. ಕುಂಭಮೇಳಕ್ಕೆ ಸರಕಾರ ಒಂದು ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ. ಸರಕಾರ, ಸುತ್ತೂರು ಮತ್ತು ಆದಿ ಚುಂಚನಗಿರಿ ಮಠಗಳ ನೇತೃತ್ವದಲ್ಲಿ ಈ ಮೇಳ ಆಚರಣೆಮಾಡಲಾಗುತ್ತಿದೆ.

ಕಾವೇರಿ, ಕಪಿಲಾ ಮತ್ತು ಸ್ಫಟಿಕಾ ಸರೋವರಗಳ ತ್ರಿವೇಣಿ ಸಂಗಮದಲ್ಲಿ ಜನರು ಪುಣ್ಯಸ್ನಾನ ಮಾಡುವುದು ಪದ್ಧತಿ. ಈ ಬಾರಿಯ ಕುಂಭಮೇಳಕ್ಕೆ 'ಆಯುರ್ಯೋಗ ' ಲಭಿಸಿರುವುದು ಪುಣ್ಯಸ್ನಾನಕ್ಕೆ ಅತ್ಯಂತ ಪ್ರಶಸ್ತ ಎನ್ನಲಾಗಿದೆ. ಈ ಮಹೋದಯ ಪುಣ್ಯಸ್ನಾನಕ್ಕೆ ಜನವರಿ 30ರಂದು ಮೀನಾ ಲಗ್ನ ಬೆಳಿಗ್ಗೆ 9 .25 ರಿಂದ 11.05 ಮತ್ತು ಮಧ್ಯಾಹ್ನ 12.25 ರಿಂದ 1 .13ರ ಸಮಯದಲ್ಲಿ ಸ್ನಾನ ಮಾಡಿದರೆ ಪಾಪ ಪರಿಹಾರವಾಗುತ್ತದೆ ಎನ್ನುವುದು ನಂಬಿಕೆ.

ಗುಂಜಾನರಸಿಂಹ ಸ್ವಾಮಿ, ಅಗಸ್ತ್ಯೇಶ್ವರಸ್ವಾ ಮಿ, ಚೌಡೇಶ್ವರಿ ದೇವಾಲಯ, ಭಾರದ್ವಾಜ ಋಷ್ಯಾಶ್ರಮ, ಬಸವ ರುದ್ರಪಾದ ದರ್ಶನ ಪಡೆದು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಲು ಅವಕಾಶ ಕಲ್ಪಿಸಲಾಗಿದೆಯೆಂದು ಜಿಲ್ಲಾ ವಿಶೇಷಾಧಿಕಾರಿ ಭಾರತಿ ಪತ್ರಿಕಾಹೇಳಿಕೆಯಲ್ಲಿ ತಿಳಿಸಿದ್ದಾರೆ. ಕುಂಭ ಮೇಳಕ್ಕೆ ಆರು ಲಕ್ಷ ಭಕ್ತಾದಿಗಳು ಆಗಮಿಸುವ ನಿರೀಕ್ಷೆ ಇದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X