ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿವ ಈಶ್ವರಪ್ಪ ರಾಜ್ಯ ನೂತನ ಬಿಜೆಪಿ ಅಧ್ಯಕ್ಷ?

By Rajendra
|
Google Oneindia Kannada News

Eshwarappa may be new BJP state chief
ಬೆಂಗಳೂರು, ಜ.21: ಇಂಧನ ಸಚಿವ ಕೆಎಸ್ ಈಶ್ವರಪ್ಪ ರಾಜ್ಯ ಬಿಜೆಪಿಯ ನೂತನ ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ. ಬುಧವಾರ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಈಶ್ವರಪ್ಪ್ಪ ಆಯ್ಕೆಯನ್ನು ಜ.30ರಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಬೆಂಗಳೂರಿನಲ್ಲಿ ಅಧಿಕೃತವಾಗಿ ಪ್ರಕಟಿಸುವ ನಿರೀಕ್ಷೆಯಿದೆ.

ಬಿಜೆಪಿ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ಅರವಿಂದ ಲಿಂಬಾವಳಿ, ಸಿಟಿ ರವಿ, ಅರಗ ಜ್ಞಾನೇಂದ್ರ, ಪ್ರಹ್ಲಾದ ಜೋಷಿ, ಸಿಎಚ್ ವಿಜಯಶಂಕರ್ ಅವರ ಹೆಸರುಗಳು ಕೇಳಿಬಂದಿದ್ದವು. ಆದರೆ ಈಶ್ವರಪ್ಪ ಅವರು ಸರ್ವಸಮ್ಮತ ಅಭ್ಯರ್ಥಿಯಾಗಿ ಬಿಂಬಿತರಾಗುವ ಮೂಲಕ ಸಂಪೂರ್ಣ ಚಿತ್ರಣ ಬದಲಾಗಿದೆ.

ಈಶ್ವರಪ್ಪ ಅವರ ಹೆಗಲಿಗೆ ಪಕ್ಷದ ಸಾರಥ್ಯ ವಹಿಸಲು ಸಂಘಪರಿವಾರದ ಹಿರಿಯರು ಹಾಗೂ ಪಕ್ಷದ ವರಿಷ್ಠರಿಂದ ಅನುಮೋದನೆ ಪಡೆದುಕೊಳ್ಳಲಾಗಿದೆ. ಒಮ್ಮೆ ಅಧ್ಯಕ್ಷ ಸ್ಥಾನವನ್ನು ನಿರ್ವಹಣೆ ಮಾಡಿದ ಅನುಭವವುಳ್ಳ ಈಶ್ವರಪ್ಪ ಅವರನ್ನು ಆಯ್ಕೆ ಮಾಡಲು ಪಕ್ಷದ ವರಿಷ್ಠರು ತೀರ್ಮಾನಿಸಿದ್ದಾರೆ.

ಈಶ್ವರಪ್ಪ ಅವರು 1993ರಲ್ಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಇದೀಗ ಅವರು ಎರಡನೇ ಬಾರಿಗೆ ಅಧ್ಯಕ್ಷರಾಗುತ್ತಿದ್ದಾರೆ. ಹಿಂದುಳಿದ ವರ್ಗಗಳನ್ನು ಪಕ್ಷದತ್ತ ಸೆಳೆಯುವುದು, ವಿರೋಧ ಪಕ್ಷಗಳ ಬಾಯಿಗೆ ಬೀಗ ಹಾಕುವುದು, ಭಿನ್ನಮತವನ್ನು ನಿಯಂತ್ರಿಸುವುದು ಮತ್ತಿತರ ಜಬಾಬ್ದಾರಿಗಳು ಈಶ್ವರಪ್ಪ ಆಯ್ಕೆಯ ಹಿಂದಿನ ಕಾರ್ಯಚಟುವಟಿಕೆಗಳು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X