ಬಿ ಎಸ್ ಯಡಿಯೂರಪ್ಪ ಅವರಿಗೆ ಹೊಟ್ಟೆ ನೋವು
ಬೆಂಗಳೂರು,
ಜ.16: ಹೊಟ್ಟೆನೋವಿನ ಕಾರಣ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಶುಕ್ರವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದರು. ಆಹಾರದಲ್ಲಿ ಉಂಟಾದ ವ್ಯತ್ಯಾಸದ ಕಾರಣ ಕೇರಳ ಪ್ರವಾಸವನ್ನು ಮೊಟಕುಗೊಳಿಸಿ ಅವರು ನಗರಕ್ಕೆ ಹಿಂತಿರುಗಿದ್ದರು. id="toptextpromo">ಬುಧವಾರ
ಚಿಕಿತ್ಸೆ ಪಡೆದ ಅವರು ಗುರುವಾರ ದಿನವಿಡೀ ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಶುಕ್ರವಾರ ಮತ್ತೆ ಹೊಟ್ಟೆ ನೋವು ಕಾಣಿಸಿದ ಕಾರಣ ಚಿಕಿತ್ಸೆಗಾಗೊ ಆಸ್ಪತ್ರೆಗೆ ದಾಖಲಾದರು. ವೈದ್ಯರ ಸಲಹೆ ಮೇರೆಗೆ ಕೆಲಕಾಲ ಆಸ್ಪತ್ರೆಯಲ್ಲೇ ಇದ್ದು ಚಿಕಿತ್ಸೆ ಪಡೆದರು. id='are-slot-1' class='oiad oi-axt oiadv'> id='top-searched-articles'>ಚಿಕಿತ್ಸೆಯ
ಬಳಿಕ ಆಸ್ಪತ್ರೆಯಿಂದ ಅವರು ಮನೆಗೆ ತೆರಳಿದರು ಎಂದು ಮೂಲಗಳು ತಿಳಿಸಿವೆ. ಶನಿವಾರ ಅವರು ಹೊಸಕೋಟೆ ತಾಲೂಕಿನ ಏಕರಾಜಪುರದಲ್ಲಿ ನಡೆಯುವ ನಿರಂತರ ಜ್ಯೋತಿ ಯೋಜನೆ ಮೊದಲ ಹಂತದ ಕಾಮಗಾರಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.











Click it and Unblock the Notifications