ಬೆಂಗಳೂರಿನಲ್ಲಿ ಅಘೋಷಿತ ನಿಷೇಧಾಜ್ಞೆ!

ಅನೇಕ ಹೋಟೆಲ್ ಗಳು ಬೆಳಗ್ಗೆ ಉಪಹಾರದ ನಂತರ ಬಾಗಿಲು ಮುಚ್ಚಿವೆ. ದೇವಾಲಯಗಳು ಕೂಡಾ ಬೆಳಗ್ಗೆ ತೆರೆದಿದ್ದು, 9 ಗಂಟೆಯೊಳಗೆ ಮುಚ್ಚಲಾಗಿದೆ. ಗ್ರಹಣದ ನಂತರ ತೆರೆಯುವುದಾಗಿ ಅಲ್ಲಿನ ಅರ್ಚಕರು ತಿಳಿಸಿದ್ದಾರೆ. ಆದರೆ, ಹೋಟೆಲ್ ಗಳು ಬಂದ್ ಆಗಿದ್ದರಿಂದ ನಗರದಲ್ಲಿರುವ ಕಚೇರಿಗೆ ತೆರಳಿರುವವರಿಗೆ ಮಧ್ಯಾಹ್ನದ ಊಟ ತೀವ್ರ ಸಮಸ್ಯೆ ಉಂಟಾಗಿದೆ.
ವಿಡಿಯೋ:ಶತಮಾನದ ಸುದೀರ್ಘ ಸೂರ್ಯಗ್ರಹಣ
ಕಂಕಣ ಸೂರ್ಯಗ್ರಹಣದಿಂದ ಪೂರ್ಣ ಕುಂಭಮೇಳ ನಡೆಯುತ್ತಿರುವ ದೇವಾಲಯಗಳ ನಗರಿ ಹರಿದ್ವಾರದಲ್ಲಿರುವ ಅಷ್ಟೂ ದೇವಾಲಯಗಳನ್ನು ಬಂದ್ ಮಾಡಲಾಗಿದೆ. ಜೊತೆಗೆ ಅಯ್ಯಪ್ಪ ದೇವಾಲಯಗಳ ಬಾಗಿಲು ಮುಚ್ಚಲಾಗಿದ್ದು, ಗ್ರಹಣದ ನಂತರ ದೇವಸ್ಥಾನ ಬಾಗಿಲು ತೆರಯಲಾಗುವುದು ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ. ಬೆಂಗಳೂರಿನಲ್ಲಿರುವ ಬಹುತೇಕ ದೇವಸ್ಥಾನಗಳು ಬಂದ್ ಆಗಿವೆ. ಜಗತ್ತಿನ ಅತಿದೊಡ್ಡ ಹಿಂದೂಗಳ ಮೇಳ ಎಂದೇ ಕರೆಯಾಗುತ್ತಿರುವ ಪೂರ್ಣ ಕುಂಭಮೇಳ ಹರಿದ್ವಾರದಲ್ಲಿರುವ ಶಿವ ದೇವಾಲಯ, ಲಕ್ಷ್ಮಿನಾರಾಯಣ, ಗಂಗಾ ಮೈಯ್ಯ ದೇವಾಲಯಗಳನ್ನು ಮುಚ್ಚಲಾಗಿದೆ.












Click it and Unblock the Notifications