ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಮಂತ್ರಿ ಶಿಷ್ಯವೇತನ :ಅರ್ಜಿ ಆಹ್ವಾನ

By Staff
|
Google Oneindia Kannada News

Student scholarships koppala bagalkote
ಕೊಪ್ಪಳ, ಜ. 12: ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯು ಕೊಪ್ಪಳ ಮತ್ತು ಬಾಗಲಕೋಟೆ ಜಿಲ್ಲೆಯ ಕಾಲೇಜುಗಳಲ್ಲಿ ಪ್ರವೇಶ ಪಡೆದ ಮಾಜಿ ಸೈನಿಕರ ಮಕ್ಕಳಿಗಾಗಿ ಪ್ರಧಾನ ಮಂತ್ರಿ ಶಿಷ್ಯವೇತನ ಯೋಜನೆಗಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ಪ್ರಸಕ್ತ ಸಾಲಿನಲ್ಲಿ ವೃತ್ತಿಪರ ಪದವಿಗಳಾದ ಎಂಜಿನಿಯರಿಂಗ್, ಬಿಡಿಎಸ್, ವೈದ್ಯಕೀಯ, ಪಶುವೈದ್ಯ, ಬಿ.ಎಡ್., ಬಿಬಿಎ, ಬಿಸಿಎ, ಬಿ ಫಾರ್ಮಾ ಇತ್ಯಾದಿಗಳಲ್ಲಿ ಪ್ರವೇಶ ಪಡೆದ ಮಾಜಿ ಸೈನಿಕರ (ಅಧಿಕಾರಿಗಳನ್ನು ಹೊರತುಪಡಿಸಿ) ಮಕ್ಕಳಿಗಾಗಿ ಭಾರತ ಸರ್ಕಾರದ ರಕ್ಷಣಾ ಮಂತ್ರಾಲಯ, ಕೇಂದ್ರೀಯ ಸೈನಿಕ ಬೋರ್ಡ್ ನವದೆಹಲಿ ಇವರು ಪ್ರಧಾನಮಂತ್ರಿ ಶಿಷ್ಯವೇತನ ಯೋಜನೆಯನ್ನು ಜಾರಿಗೊಳಿಸಿದ್ದಾರೆ.

ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಮೇಲ್ಕಂಡ ಕೋರ್ಸ್‌ಗಳ ಪ್ರವೇಶಕ್ಕೆ ನಿಗದಿಪಡಿಸಿದ ಶಿಕ್ಷಣದಲ್ಲಿ ಕನಿಷ್ಟ ಪ್ರತಿಶತ 60 ಅಂಕಗಳನ್ನು ಹೊಂದಿರುವುದು ಕಡ್ಡಾಯ. ಶಿಷ್ಯ ವೇತನ ಮಂಜೂರಾತಿಯನ್ನು ಯುದ್ಧ/ಯುದ್ಧದಂತಹ ಕಾರ್ಯಾಚರಣೆಯಲ್ಲಿ ಮಡಿದ,ಗಾಯಗೊಂಡು ಬಿಡುಗಡೆಯಾದ ಯೋಧರ ಅವಲಂಬಿತರು, ಸೈನ್ಯ ಸೇವೆಯಲ್ಲಿ ಇದ್ದಾಗ ಮರಣ ಹೊಂದಿದ ಯೋಧರ ಅವಲಂಬಿತರು, ವೈದ್ಯಕೀಯ ಆಧಾರದ ಮೇಲೆ ಸೇವೆಯಿಂದ ಬಿಡುಗಡೆಯಾದ ಮಾಜಿ ಸೈನಿಕರ ಅವಲಂಬಿತರು, ಶೌರ್ಯ ಪ್ರಶಸ್ತಿ ವಿಜೇತ ಮಾಜಿ ಸೈನಿಕರ ಅವಲಂಬಿತರು, ಸಾಮಾನ್ಯ ಮಾಜಿ ಸೈನಿಕರ ಅವಲಂಬಿತರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಅರ್ಹ ಮಾಜಿ ಸೈನಿಕರು ಹೆಚ್ಚಿನ ಮಾಹಿತಿ ಹಾಗೂ ನಿಗದಿತ ನಮೂನೆಯ ಹೊಸ ಅರ್ಜಿ ನಮೂನೆ ಹಾಗೂ ನವೀಕರಣದ ಅರ್ಜಿ ನಮೂನೆಗಳನ್ನು ಉಪನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಬಾಗಲಕೋಟೆ ಇವರಿಂದ ಅಥವಾ ವೆಬ್‌ಸೈಟ್ www.mod.nic.in ಡೈನ್ ಲೋಡ್ ಮಾಡಿಕೊಳ್ಳಬಹುದು.

ಭರ್ತಿ ಮಾಡಿದ ಶಿಷ್ಯ ವೇತನದ ಹೊಸ ಅರ್ಜಿಯನ್ನು 2010 ಫೆಬ್ರವರಿ 10 ರ ಒಳಗೆ ಉಪನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಜಿಲ್ಲಾಡಳಿತ ಭವನ, ಕೊಠಡಿ ಸಂ: 03, ಬಾಗಲಕೋಟೆ ಇವರಿಗೆ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X