ಜನಾರ್ದನರೆಡ್ಡಿ ವಿರುದ್ಧ ಸಂಡೂರು ಕೋರ್ಟ್ ವಾರಂಟ್
ಬಳ್ಳಾರಿ,
ಜ. 6 : ಗಡಿಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಮತ್ತು ರಾಯದುರ್ಗ ಶಾಸಕ ರಾಮಚಂದ್ರರೆಡ್ಡಿ ವಿರುದ್ದ ಸಂಡೂರು ಜೆಎಂಎಫ್ ಸಿ ನ್ಯಾಯಾಲಯ ಡಿಸೆಂಬರ್ 30 ರಂದು ಜಾಮೀನು ರಹಿತ ವಾರಂಟ್ ಹೊರಡಿಸಿದೆ. id="toptextpromo">ಗಡಿ
ಗುರುತು ನಾಶ ಮತ್ತು ತಮಗೆ ಪ್ರಾಣ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ಟಿಎನ್ಆರ್ ಗಣಿ ಕಂಪೆನಿ ಮಾಲೀಕ ಟಪಾಲ್ ನಾರಾಯಣ ರೆಡ್ಡಿ 2006ರಲ್ಲಿ ತೋರಣಗಲ್ಲು ಠಾಣೆಯಲ್ಲಿ ರೆಡ್ಡಿ ಸೇರಿದಂತೆ ಐವರ ವಿರುದ್ದ ಪ್ರಕರಣ ದಾಖಲಿಸಿದ್ದರು. ನಿರೀಕ್ಷಣ ಜಾಮೀನು ಪಡೆದಿದ್ದ ಸಚಿವ ರೆಡ್ಡಿ ಮತ್ತು ಶಾಸಕ ಎರಡು ವರ್ಷಗಳಿಂದ ಕೋರ್ಟ್ ಗೆ ಹಾಜರಾಗಿರಲಿಲ್ಲ. id='are-slot-1' class='oiad oi-axt oiadv'> id='top-searched-articles'>ತುಮಟಿ
ಮೈನಿಂಗ್ ಕಂಪೆನಿಯ ಗಡಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗೆ ಖುದ್ದು ಹಾಜರಾಗದ ಸಚಿವ ರೆಡ್ಡಿ ವಿರುದ್ದ ಸಂಡೂರು ನ್ಯಾಯಾಲಯದ ನ್ಯಾಯಮೂರ್ತಿ ಅಮರನಾಥ್ ಜಾಮೀನು ರಹಿತ ವಾರಂಟ್ ಹೊರಡಿಸಿದ್ದಾರೆ.











Click it and Unblock the Notifications