ಪ್ರತಿಪಕ್ಷಗಳ ಗೂಂಡಾ ವರ್ತನೆ : ಸಿಎಂ ಯಡಿಯೂರಪ್ಪ

ವಿಧಾನಸಭೆ ಅನಿರ್ದಿಷ್ಟಾವಧಿಗೆ ಮುಂದೂಡಿದ ನಂತರ ಮಾತನಾಡಿದ ಅವರು, ಕಳೆದ ಮೂರು ದಶಕಗಳಲ್ಲಿ ಕಂಡರಿಯದ ಘಟನೆ ವಿಧಾನಸಭೆಯಲ್ಲಿ ನಡೆದಿದ್ದು, ಪ್ರತಿಪಕ್ಷ ಸದಸ್ಯರು ತಮಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ ಎನ್ನುವುದನ್ನು ಸಾಬೀತು ಮಾಡಿದ್ದಾರೆ ಎಂದರು. ಕಾಂಗ್ರೆಸ್ ಜೆಡಿಎಸ್ ಒಟ್ಟಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದವು. ಸೋಲಿನ ಭೀತಿಯಿಂದ ಮುಂದಾಗಬಹುದಾದ ಮುಖಭಂಗ ತಪ್ಪಿಸಿಕೊಳ್ಳುವ ದೃಷ್ಟಿಯಿಂದ ಹತಾಶರಾಗಿ ದಾಂಧಲೆ ನಡೆಸಿದರು. ವಿಧಾನ ಮಂಡಲದ ಇತಿಹಾಸದಲ್ಲಿ ಕೇಳರಿಯದ ಘಟನೆ ಇದಾಗಿದ್ದು ಸ್ಪೀಕರ್ ಮೇಲೆ ಕಾಗದವನ್ನು ಹರಿದೆಸೆದು ಕಡತಗಳನ್ನು ಕಸಿಯಲು ಯತ್ನಿಸಿದ ಘಟನೆ ಖಂಡನೀಯ ಎಂದು ಯಡಿಯೂರಪ್ಪ ಹೇಳಿದರು.












Click it and Unblock the Notifications