ಬಿಜೆಪಿ ಹತ್ತು ಶಾಸಕರು ರಾಜೀನಾಮೆಗೆ ನಿರ್ಧಾರ
ಬೆಂಗಳೂರು,
ಡಿ.29: ರಾಜ್ಯ ಬಿಜೆಪಿಯಲ್ಲಿನ ಭಿನ್ನಮತ ಹೊಸ ತಿರುವು ಪಡೆದಿದ್ದ್ದು ಮುಖ್ಯಮಂತ್ರಿ ಯಡಿಯೂರಪ್ಪ ಸರಕಾರ ಇಕ್ಕಟ್ಟಿಗೆ ಸಿಲುಕಿದೆ. ಬಿಜೆಪಿಯ ಹತ್ತಕ್ಕೂ ಹೆಚ್ಚು ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ತಮ್ಮನ್ನು ಪಕ್ಷದ ನಿಷ್ಠಾವಂತರು ಎಂದು ಕರೆದುಕೊಂಡಿರುವ ಈ ಶಾಸಕರು, ವಿಧಾನಸಭೆ ಸ್ಪೀಕರ್ ಅವರಿಗೆ ಮಂಗಳವಾರ ರಾಜೀನಾಮೆ ಪತ್ರ ಸಲ್ಲಿಸುವ ಸಾಧ್ಯತೆ ಇದೆ. ಈ ಸಂಬಂಧ ಸಮಯ ನಿಗದಿಪಡಿಸುವಂತೆ ಸ್ಪೀಕರ್ ಅವರನ್ನು ಕೋರಿದ್ದಾರೆ. id="toptextpromo">ಶಾಸಕರಾದ
ಕೊಡಗಿನ ಅಪ್ಪಚ್ಚು ರಂಜನ್, ಮೈಸೂರಿನ ಎ.ಎಸ್.ರಾಮದಾಸ್,ಚಿಕ್ಕಮಗಳೂರಿನ ಸಿ.ಟಿ.ರವಿ, ಬಾಗಲಕೋಟದ ಚರಂತಿಮಠ, ಆನೇಕಲ್ ನಾರಾಯಣಸ್ವಾಮಿ ಮತ್ತಿತರರು ಈ ತಂಡದಲ್ಲಿದ್ದಾರೆ. ಮೊದಲು ಮಂಗಳವಾರ ಬೆಳಗ್ಗೆ ಈ ಶಾಸಕರು ಸಭೆ ಸೇರಿ ಚರ್ಚಿಸಿದ ಬಳಿಕ ರಾಜೀನಾಮೆ ನೀಡುವ ಕುರಿತು ಒಮ್ಮತದನಿರ್ಧಾರ ತೆಗೆದುಕೊಳ್ಳಲು ತೀರ್ಮಾನಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಸರಕಾರದಲ್ಲಿ
ನಡೆಯುತ್ತಿರುವ ಬೆಳವಣಿಗೆಯಿಂದಬೇಸತ್ತು, ಸರಕಾರ ಉಳಿಸಿ ಎಂದು ಒತ್ತಾಯಿಸಿ ರಾಜೀನಾಮೆ ನೀಡುತ್ತಿರುವುದಾಗಿ ಈ ಶಾಸಕರು ಕಾರಣ ಕೊಡುತ್ತಾರೆ.ಮುಂದೇನಾಗುತ್ತದೆ ಎಂದು ನಾಳೆವರೆಗೆ ಕಾದು ನೋಡಿ ಎಂದು ಈ ಶಾಸಕರು ಹೇಳುತ್ತಾರೆ. ಇವರು ಕರೆದಿರುವ ಸಭೆಯಲ್ಲಿ 34ಕ್ಕೂ ಹೆಚ್ಚಿನ ಶಾಸಕರುಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.











Click it and Unblock the Notifications