ಸಂಚಾರಿ ಹೈಕೋರ್ಟ್ ಪೀಠ ಕಾಯಂಗೆ ಕ್ರಮ
ಬೆಂಗಳೂರು,
ಡಿ. 28 : ಧಾರವಾಡ ಹಾಗೂ ಗುಲ್ಬರ್ಗದಲ್ಲಿ ಆರಂಭಗೊಂಡಿರುವ ಹೈಕೋರ್ಟ್ ಸಂಚಾರಿ ಪೀಠಗಳನ್ನು ಕಾಯಂ ಪೀಠಗಳನ್ನಾಗಿಸುವ ಪರಿವರ್ತಿಸುವುದಾಗಿ ಕೇಂದ್ರ ಕಾನೂನು ಸಚಿವ ಎಂ ವೀರಪ್ಪ ಮೊಯ್ಲಿ ಹೇಳಿದ್ದಾರೆ. id="toptextpromo">ರಾಜ್ಯ
ವಕೀಲರ ಪರಿಷತ್ ನ 9ನೇ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಹಿಂದೆ ಸಂಚಾರಿ ಪೀಠಗಳಲ್ಲಿ ಜರುಗಿದ ಮೊದಲ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ನೀಡಿದ್ದ ಭರವಸೆಯಂತೆ ಕಾಯಂಗೆ ಕ್ರಮಕೈಗೊಳ್ಳಲಾಗಿದ್ದು, ಅವು ಕಾಯಂ ಆಗುವುದರಲ್ಲಿ ಅನುಮಾನವಿಲ್ಲ ಎಂದರು. ರಾಜ್ಯದಲ್ಲಿನ ಎರಡು ಸಂಚಾರಿ ಪೀಠಗಳನ್ನು ಕಾಯಂಗೆ ಪೂರಕವಾಗಿ ಹೈಕೋರ್ಟ್ ಗಳಲ್ಲಿ ನ್ಯಾಯಾಧೀಶರ ಸಂಖ್ಯೆ ಹೆಚ್ಚಳಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದು ಮೊಯ್ಲಿ ತಿಳಿಸಿದರು. id='are-slot-1' class='oiad oi-axt oiadv'> id='top-searched-articles'>ನ್ಯಾಯಾಂಗ
ವ್ಯವಸ್ಥೆಯನ್ನು ಮತ್ತಷ್ಟು ಭದ್ರಪಡಿಸುವ ನಿಟ್ಟಿನಲ್ಲಿ ಅಮೂಲಾಗ್ರ ಬದಲಾವಣೆಗೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದ್ದು, ನನ್ನ ಈ ಯತ್ನಕ್ಕೆ ನ್ಯಾಯವಾದಿಗಳು ಪೂರ್ಣ ಬೆಂಬಲ ನೀಡಬೇಕೆಂದು ವೀರಪ್ಪ ಮೊಯ್ಲಿ ಆಗ್ರಹಿಸಿದರು.











Click it and Unblock the Notifications