ರೇಣುಕಾ ಸಂಪುಟದಿಂದ ಕೈಬಿಡಿ: ನರ್ಸ್ ಜಯಲಕ್ಷ್ಮಿ
ಬೆಂಗಳೂರು,
ಡಿ. 28 : ಅಬಕಾರಿ ಖಾತೆ ಸಚಿವ ಎಂ ಪಿ ರೇಣುಕಾಚಾರ್ಯ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಒತ್ತಡಗಳು ಹೆಚ್ಚುತ್ತಿರುವ ಬೆನ್ನಲ್ಲೇ ಅವರ ಮಾಜಿ ಪ್ರಯತಮೆ ಎಂದು ಹೇಳಲಾದ ನರ್ಸ್ ಜಯಲಕ್ಷ್ಮಿ ಅವರು ರೇಮುಕಾಚಾರ್ಯ ಅವರ ವಿರುದ್ದ ಸೆಡ್ಡು ಹೊಡೆದಿದ್ದಾರೆ. ಅವರನ್ನು ಸಂಪುಟದಿಂದ ಕೈಬಿಡುವವರೆಗೂ ಹೋರಾಟ ನಡೆಸುವುದಲ್ಲದೇ, ರಾಜ್ಯಪಾಲರಿಗೆ ದೂರು ನೀಡುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ. id="toptextpromo">ರೇಣು
ತಮಗೆ ಲೈಂಗಿಕ ಮತ್ತು ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ. ಅಂಥವರು ಸಚಿವರಾಗಬಾರದು. ತಕ್ಷಣವೇ ಅವರನ್ನು ಸಂಪುಟದಿಂದ ಕೈಬಿಡಬೇಕೆಂದು ಆಗ್ರಹಿಸಿ ಹೋರಾಟ ನಡೆಸಲು ಚಿಂತನೆ ನಡೆಸಿರುವುದಾಗಿ ಅವರು ಹೇಳಿದ್ದಾರೆ. ತಮಗೆ 20ಕ್ಕೂ ಹೆಚ್ಚು ಮಹಿಳಾಪರ ಸಂಘಟನೆಗಳು ಬೆಂಬಲ ಸೂಚಿಸಿವೆ. ಸಂಘಟನೆಗಳೊಂದಿಗೆ ಚರ್ಚಿಸಿ ಒಂದೆರೆಡು ದಿನಗಳಲ್ಲಿ ಹೋರಾಟದ ಸ್ವರೂಪ ನಿರ್ಧರಿಸುವುದಾಗಿ ಜಯಲಕ್ಷ್ಮಿ ಹೇಳಿದರು. id='are-slot-1' class='oiad oi-axt oiadv'> id='top-searched-articles'>ರೇಣುಕಾಚಾರ್ಯ
ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಒತ್ತಡ ತೀವ್ರಗೊಂಡಿದ್ದು, ವರಿಷ್ಠರ ಅಂಗಳ ತಲುರುವ ನಿರೀಕ್ಷೆ ಇದೆ. ನರ್ಸ್ ಜಯಲಕ್ಷ್ಮಿ ಅವರೊಂದಿಗಿನ ರಾಸಲೀಲೆಗೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರ ಗಮನ ಸೆಳೆಯುವ ಸಾಧ್ಯತೆ ಇದೆ.











Click it and Unblock the Notifications