ಮೊದಲು ಉರ್ದು ವಿವಿ ಆಮೇಲೆ ಸಂಸ್ಕೃತ ವಿವಿ
ಬೆಂಗಳೂರು,
ಡಿ 24 : ರಾಜ್ಯದಲ್ಲಿ ಸಂಸ್ಕೃತ ವಿವಿಗಿಂತ ಉರ್ದು ವಿವಿ ತೆರೆಯುವ ಅಗತ್ಯವಿದೆ. ಸಂಸ್ಕೃತ ವಿವಿ ಬಗ್ಗೆ ಚರ್ಚಿಸಿದ್ದೇವೆ, ಉರ್ದು ವಿವಿ ಕುರಿತು ಏಕೆ ಚರ್ಚಿಸಬಾರದು? ಸಂಸ್ಕೃತಕ್ಕಿಂತ ಉರ್ದು ವಿವಿಯ ಅಗತ್ಯ ಕಾಣುತ್ತಿದೆ ಎಂದು ಜೆಡಿಎಸ್ ನಾಯಕ ಎಂ ಸಿ ನಾಣಯ್ಯ ವಿಧಾನ ಪರಿಷತ್ ನಲ್ಲಿ ಆಗ್ರಹಿಸಿದರು. id="toptextpromo">ರಾಜ್ಯದಲ್ಲಿ
ಉರ್ದು ಮಾತನಾಡುವವರು ಶೇ 14.16 ಮಂದಿ ಇದ್ದಾರೆ. ಮಾಧ್ಯಮದ ತೊಂದರೆಯಿಂದ ಈ ಭಾಷೆಯವರು ಎಸ್ಎಸ್ಎಲ್ಸಿಗೆ ವಿದ್ಯಾಭ್ಯಾಸ ಮುಗಿಸಿ ಬಿಡುತ್ತಾರೆ. ಹೀಗಾಗಿ ಪ್ರಯೋಗಿಕವಾಗಿಯಾದರೂ ಉರ್ದು ಪಿಯುಸಿ ಕಾಲೇಜು ಪ್ರಾರಂಭಿಸಿ ಎಂದು ನಾಣಯ್ಯ ಆಗ್ರಹಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಇದಕ್ಕೆ
ಧ್ವನಿಗೂಡಿಸಿದ ಪ್ರತಿಪಕ್ಷದ ನಾಯಕ ಉಗ್ರಪ್ಪ, ವಿದ್ಯೆ ಕಲಿಯುವುದರ ಗುರಿ ಉದ್ಯೋಗ ಗಿಟ್ಟಿಸುವುದೊಂದೇ ಅಲ್ಲ. ನೀವು ಸಂಸ್ಕೃತ ವಿವಿ ಮಾಡಲು ಹೊರಟಿದ್ದೀರಿ, ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದವರು ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೇಗೆ ಜಯಿಸುತ್ತಾರೆ? ಹಾಗೆ ನೋಡಿದರೆ ಉರ್ದು ಹೆಚ್ಚು ಚಾಲ್ತಿಯಲ್ಲಿದೆ. ಕಾಲೇಜು ಆರಂಭಿಸಿದರೆ ಅನುಕೂಲ ಎಂದು ನಾಣಯ್ಯ ಅವರನ್ನು ಬೆಂಬಲಿಸಿದರು











Click it and Unblock the Notifications