ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಡಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇನ್ಫಿ ಸಹಾಯ

By Staff
|
Google Oneindia Kannada News

Infosys Scholarship for Poor Students
ಬೆಂಗಳೂರು, ಡಿ. 24 : ವಿದ್ಯಾರ್ಥಿಗಳೆ ನೀವು ಪ್ರತಿಭಾವಂತರೇ, ಹೆಚ್ಚಿನ ವಿದ್ಯಾಭ್ಯಾಸಕ್ಕೆ ಹಣಕಾಸು ಸಮಸ್ಯೆ ತೀವ್ರ ಅಡ್ಡಗಾಲಾಗಿದೆಯೇ... ಭಯಪಡಬೇಡಿ. ದೇಶದ ಪ್ರತಿಷ್ಠಿತ ಸಾಫ್ಟ್ ವೇರ್ ಸಂಸ್ಥೆಯಾದ ಇನ್ಫೋಸಿಸ್ ಸಹಯೋಗದಲ್ಲಿ ಪ್ರೇರಣಾ ಎಂಬ ಸರಕಾರೇತರ ಸಂಸ್ಥೆಯೊಂದು ಬಡವಿದ್ಯಾರ್ಥಿಗಳ ಉನ್ನತ ವಿದ್ಯಾಭ್ಯಾಸಕ್ಕೆ ಧನಸಹಾಯ ಮಾಡಲು ಮುಂದಾಗಿದೆ.

ಎಸ್ಎಸ್ಎಸ್ ಸಿ ಪರೀಕ್ಷೆಯಲ್ಲಿ ಅತ್ಯಧಿತ ಅಂಕ ಗಳಿಸಿದ್ದರೂ ಹಣಕಾಸಿನ ಅಡಚಣೆಯಿದೆ ಎಂದು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳಬೇಕಿಲ್ಲ. ಎಸ್ಎಸ್ಎಲ್ ಸಿ ಯಲ್ಲಿ ಶೇ.80ಕ್ಕೂ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳು ಪ್ರೇರಣಾ ಎನ್ ಜಿಓ ಸಂಸ್ಥೆಯಿಂದ ಹಣಕಾಸಿನ ಸಹಾಯ ಪಡೆದುಕೊಳ್ಳಬಹುದು. ಆದರೆ, ವಿದ್ಯಾರ್ಥಿಗಳು ಧನಸಹಾಯ ಪಡೆಯಬೇಕಾದರೆ ಪ್ರೇರಣಾ ಸಂಸ್ಥೆ ನಡೆಸುವ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕಾಗಿರುವುದು ಅವಶ್ಯವಾಗಿದೆ. ಪ್ರೇರಣಾ ಎನ್ ಜಿಓ ಸಂಸ್ಥೆಯೂ ಇನ್ಫೋಸಿಸ್ ಸಹಾಯ ಮತ್ತು ಸಹಕಾರದೊಂದಿಗೆ ಕಾರ್ಯನಿರ್ವಹಿಸುತ್ತಿದೆ.

ಹೆಚ್ಚಿನ ಮಾಹಿತಿ ಪ್ರೇರಣಾ ಸಂಸ್ಥೆ ಈ ಶಾಖೆಗಳನ್ನು ಸಂಪರ್ಕಿಸಬಹುದು

ಸರಸ್ವತಿ (99009 06338)
ಸುಭಾಂಕರ್, ನಂ 580, 44 ನೇ ಅಡ್ಡರಸ್ತೆ
ಮೊದಲನೇ ಮುಖ್ಯ ರಸ್ತೆ, ಜಯನಗರ 7ನೇ ಹಂತ
ಬೆಂಗಳೂರು

ಶಿವಕುಮಾರ್ (99866 30301)
ಹನುಮಂತನಗರ ಕಚೇರಿ, ಬೆಂಗಳೂರು

ಬಿಂದು (99645 34667)
ಯಶವಂತಪುರ ಕಚೇರಿ, ಬೆಂಗಳೂರು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X