ನ್ಯೂ ಇಯರ್ ಪಾರ್ಟಿ ಮೇಲೆ ಉಗ್ರರ ಚಿತ್ತ
ನವದೆಹಲಿ,
ಡಿ. 22 : ಹೊಸ ವರ್ಷದ ಸಂಭ್ರಮದ ಸಮಯದಲ್ಲಿ ಬೆಂಗಳೂರು ಸೇರಿದಂತೆ ದೇಶದ 12 ಪ್ರಮುಖ ನಗರಗಳ ಮೇಲೆ ದಾಳಿ ನಡೆಸಲು ಭಯೋತ್ಪಾದಕರು ಸಂಚು ರೂಪಿಸಿದ್ದಾರೆ ಎಂದು ಗುಪ್ತಚರ ಇಲಾಖೆ ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಿದೆ. ಇದರಿಂದ ಕೇಂದ್ರದ ಗೃಹ ಇಲಾಖೆ ಪ್ರಮುಖ ನಗರಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಆಯಾ ರಾಜ್ಯಗಳ ಗೃಹ ಇಲಾಖೆಗೆ ಸೂಚನೆ ನೀಡಿದೆ. id="toptextpromo">ಸಾಫ್ಟ್
ವೇರ್ ಕಂಪನಿಗಳು ಹೆಚ್ಚಾಗಿರುವ ಬೆಂಗಳೂರು, ಆಹಮದಾಬಾದ್, ಸೂರತ್, ಕೊಲ್ಕತ್ತಾ, ದೆಹಲಿ, ಮುಂಬೈ, ಜೈಪುರ ಸೇರಿ 12 ನಗರಗಳ ಮೇಲೆ ಉಗ್ರರು ಕೆಂಗಣ್ಣು ಬೀರಿದ್ದಾರೆ ಎಂದು ಗೊತ್ತಾಗಿದೆ. ಈ ನಗರಗಳ ಪ್ರಮುಖ ಜನನಿಬಿಡ ಪ್ರದೇಶಗಳಲ್ಲಿ ಭಾರಿ ಬಿಗಿ ಭದ್ರತೆ ನಿಯೋಜಿಸಲು ಕೇಂದ್ರ ಗೃಹ ಇಲಾಖೆ ಸ್ಪಷ್ಟ ನಿರ್ದೇಶನ ನೀಡಿದೆ. ಬಿಗಿ ಭದ್ರತೆಗೆ ಸಂಬಂಧಿಸಿದಂತೆ ಕಳೆದ ಒಂದು ವಾರದಿಂದ ಕೇಂದ್ರ ಗೃಹ ಇಲಾಖೆ ಹಿರಿಯ ಅಧಿಕಾರಿಗಳು ಉನ್ನತ ಮಟ್ಟದ ಸಭೆ ನಡೆಸುತ್ತಿದ್ದು, ಭದ್ರತೆಗಾಗಿ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. id='are-slot-1' class='oiad oi-axt oiadv'> id='top-searched-articles'>ಕ್ರಿಸ್ಮಸ್
ದಿನವಾದ ಶುಕ್ರವಾರದಿಂದ ಆರಂಭವಾದ ರಜೆ ಮೊಹರಂವರೆಗೂ ಆಂದರೆ ಸೋಮವಾರದವರೆಗೂ ಸುದೀರ್ಘ ರಜೆ ದೊರೆಯಲಿದೆ. ಈ ಸಂದರ್ಭದಲ್ಲಿ ಜನರು ಶಾಪಿಂಗ್ ಮತ್ತಿತರ ಕೆಲಸ ಕಾರ್ಯಗಳಿಗೆ ಮನೆಯಿಂದ ಹೊರಬೀಳುವುದು ಸಾಮಾನ್ಯ. ಉಗ್ರರ ಕರೆಗಂಟೆಯ ಹಿನ್ನೆಲೆಯಲ್ಲಿ ಭಾರಿ ಭದ್ರತೆಯನ್ನು ಒದಗಿಸುವುದು ಸೂಕ್ತ. ಬೆಂಗಳೂರು ಪೊಲೀಸ್ ಆಯುಕ್ತ ಶಂಕರ ಬಿದರಿ ಈ ಬಗ್ಗೆ ಬೇಗನೆ ಗಮನ ಹರಿಸಿ, ಜನನಿಬಿಡ ಮಾಲ್ ಗಳು ಸೇರಿದಂತೆ ಅಗತ್ಯ ಪ್ರದೇಶದಲ್ಲಿ ಪೊಲೀಸ್ ಭದ್ರತೆ ನಿಯೋಜಿಸಬೇಕಿದೆ.











Click it and Unblock the Notifications