ಸಿಬಿಐ ಕುಣಿಕೆಯಲ್ಲಿ ಕೃಷ್ಣಯ್ಯ ಶೆಟ್ಟಿ
ಬೆಂಗಳೂರು,
ಡಿ.18: ರಿಯಲ್ ಎಸ್ಟೇಟ್ ವ್ಯವಹಾರ ದಲ್ಲಿ ಬ್ಯಾಂಕಿಗೆ ನಕಲಿ ದಾಖಲೆಗಳನ್ನು ಸಲ್ಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ವಿರುದ್ಧ ಸಿಬಿಐ ತನಿಖೆ ನಡೆಸಬಹುದು ಎಂದು ಹೈಕೋರ್ಟ್ ಆದೇಶಿಸಿದೆ. id="toptextpromo">ಸಿಬಿಐ
ಸಲ್ಲಿಸಿದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾ.ಸುಭಾಷ್.ಬಿ.ಅಡಿ ಅವರ ಪೀಠ ಈ ಆದೇಶ ನೀಡಿದೆ. ತಮ್ಮ ವಿರುದ್ಧ ಸಿಬಿಐ ದಾಖಲಿಸಿರುವ ಪ್ರಕರಣವನ್ನು ವಜಾಗೊಳಿಸಬೇಕೆಂದು ಕೋರಿ ಕೃಷ್ಣಯ್ಯಶೆಟ್ಟಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಏಕ ಸದಸ್ಯ ಪೀಠ ಏಪ್ರಿಲ್ ತಿಂಗಳಲ್ಲಿ ತಡೆಯಾಜ್ಞೆ ನೀಡಿತ್ತು. ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು id='are-slot-1' class='oiad oi-axt oiadv'> id='top-searched-articles'>ವಿಚಾರಣೆ
ನಡೆಸಿದ ಪೀಠ, ತಡೆಯಾಜ್ಞೆ ತೆರವುಗೊಳಿಸಿ ಕೆಲ ಮಾರ್ಪಾಡು ಮಾಡಿದೆ. ಇದರಲ್ಲಿ ಸಿಬಿಐ ತನಿಖೆ ನಡೆಸಬಹುದು. ಆದರೆ, ಬಂಧಿಸುವಂತಿಲ್ಲ. ತನಿಖೆಯ ಪ್ರತಿ ಹಂತದಲ್ಲಿ ಮಾಜಿ ಸಚಿವರು ಸಿಬಿಐನೊಂದಿಗೆ ಸಹಕರಿಸಬೇಕು. ತನಿಖೆ ನಡೆಸಿದ ವರದಿಯನ್ನು ಫೆ.3ಕ್ಕೆ ಪೀಠಕ್ಕೆ ಸಲ್ಲಿಸಬೇಕೆಂದು ಪೀಠ ಆದೇಶಿಸಿದೆ. ಬಿಎಂಟಿಸಿ, ಕೆಎಸ್ ಆರ್ ಟಿಸಿ, ಐಟಿಐ,ಎಡಿಇ, ಹೆಚ್ ಎ ಎಲ್, ಬೆಮೆಲ್, ಬಿಎಸ್ಸೆನ್ನೆಲ್ ಮುಂತಾದ ಸಂಸ್ಥೆಗಳ ಹೆಸರನ್ನು ಬಳಸಿ ನಕಲಿ ದಾಖಲೆಗಳ ಮೂಲಕ ಬ್ಯಾಂಕಿನಿಂದ ಗೃಹ ಸಾಲ(ಸುಮಾರು 7.17 ಕೋಟಿ ರು) ಪಡೆದ ವಂಚಕರಿಗೆನೆರವು ನೀಡಿದ ಆರೋಪವನ್ನು ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಎದುರಿಸುತ್ತಿದ್ದಾರೆ.











Click it and Unblock the Notifications