ಸದ್ಯದಲ್ಲೆ ಜನತೆಗೆ ಸಿಹಿ ಸುದ್ದಿ: ಎಚ್ಡಿಕೆ
ಬೆಂಗಳೂರು,
ಡಿ. 16 : ರಾಜ್ಯದ ಜನತೆಗೆ ಒಳ್ಳೆಯದಾಗುವ ಸಿಹಿ ಸುದ್ದಿ ಸದ್ಯದಲ್ಲೇ ಹೊರಬೀಳಲಿದೆ ಎಂದು ಜೆಡಿಎಸ್ ಮುಖಂಡ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. 51 ನೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಅವರು ಇಂದು ಬೆಂಗಳೂರಿನಲ್ಲಿ ಕೇಕ್ ಕತ್ತರಿಸಿದ ನಂತರ ಈರೀತಿ ಭವಿಷ್ಯ ನುಡಿದರು. ಬೆಳವಣಿಗೆಗಳು ಯಾವ ರೀತಿಯಲ್ಲಿ ಇರುತ್ತವೆ ಎಂಬ ಬಗ್ಗೆ ಅವರು ವಿವರಿಸಲಿಲ್ಲ. id="toptextpromo">ಹುಟ್ಟುಹಬ್ಬದ
ಸಂಭ್ರಮಾಚರಣೆಯಲ್ಲಿ ನೂರಾರು ಜೆಡಿ ಎಸ್ ಕಾರ್ಯಕರ್ತರು ಹಾಗೂ ಅವರ ಧರ್ಮಪತ್ನಿ,ಶಾಸಕಿ ಅನಿತಾ ಕುಮಾರಸ್ವಾಮಿ ಉಪಸ್ಥಿತರಿದ್ದರು. 'ಈಗಲೇ ಏನೂ ಹೇಳಲಾರೆ, ಆದರೆ ತಾಯಿಯ ಆಶೀರ್ವಾದದಿಂದ ರಾಜ್ಯದ ಜನತೆಗೆ ಒಳ್ಳೆಯದಾಗಬೇಕೆಂಬುದೇ ನನ್ನ ಅಪೇಕ್ಷೆ. ತಮಗೆ ಯಾವುದೇ ಅಧಿಕಾರದ ಆಸೆ ಇಲ್ಲ' ಎಂದು ಕುಮಾರಸ್ವಾಮಿ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು. id='are-slot-1' class='oiad oi-axt oiadv'> id='top-searched-articles'>(ದಟ್ಸ್
ಕನ್ನಡ ವಾರ್ತೆ)











Click it and Unblock the Notifications