ಪಶ್ಚಿಮ ಘಟ್ಟದಲ್ಲಿ ನಕ್ಸಲೀಯರ ಶಿಕಾರಿ

ರಾಜ್ಯ ಮೀಸಲು ಪೊಲೀಸು ಪಡೆ, ನಕ್ಸಲ್ ನಿಗ್ರಹ ದಳ ಮತ್ತು ಮಾಮೂಲು ಪೊಲೀಸ್ ಪಡೆಯ ಆಯ್ದ ಸಿಬ್ಬಂದಿಯನ್ನು ಒಳಗೊಂಡಿರುವ ಸಮರ್ಥ ಜಂಟಿ ಕಾರ್ಯಾಚರಣೆ ತಂಡವನ್ನು ರಚಿಸಲಾಗಿದೆ. ಡಿಸೆಂಬರ್ 16ರಿಂದ ಮೂರು ದಿನಗಳ ನಕ್ಸಲ್ ಬೇಟೆ ಇಂದಿನಿಂದ ಶುರುವಾಗಿದೆ ಎಂದು ರಾಜ್ಯ ಸರಕಾರದ ಉನ್ನತ ಮೂಲಗಳು ಬೆಂಗಳೂರಿನಲ್ಲಿ ತಿಳಿಸಿವೆ.
ಕಾರ್ಯಾಚರಣೆ ತಂಡಗಳನ್ನು ವಿವಿಧ ಗುಂಪುಗಳಾಗಿ ವಿಂಗಡಿಸಲಾಗಿದ್ದು ಘಟ್ಟ ಸಾಲಿನ ನಾನಾ ಮೂಲೆಗಳಿಂದ ಏಕಕಾಲಕ್ಕೆ ಬೇಟೆ ನಡೆಯುತ್ತದೆ. ಈ ಕಾರ್ಯಾಚರಣೆ ದಟ್ಟ ಕಾಡುಗಳಿಂದ ಆವೃತವಾಗಿರುವ ಚಿಕ್ಕಮಗಳೂರು, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುತ್ತದೆ. ನವೆಂಬರ್ ಮಾಹೆಯಲ್ಲಿ ಇದೇ ರೀತಿಯ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ, ಕಾರ್ಯಪಡೆಗಳ ನಡುವೆ ಸಂಪರ್ಕ, ಸಂವಹನ ಮತ್ತು ತಾಳಮೇಳದ ಕೊರತೆಯಿಂದಾಗಿ ಗುರಿ ಈಡೇರಿರಲಿಲ್ಲ.
ಇದನ್ನು ಮನಗಂಡ ಸರಕಾರ ಈ ಬಾರಿ ಪಡೆಗಳಿಗೆ ಅಧುನಿಕ ಶಸ್ತ್ರಾಸ್ತ್ರ ಮತ್ತು ಆಧುನಿಕ ಸಂಪರ್ಕ ಉಪಕರಣಗಳನ್ನು ನೀಡಿದ್ದು ನಕ್ಸಲರು ಎಲ್ಲೇ ಅಡಗಿರಲಿ ಅವರನ್ನು ಕಟ್ಟಿಹಾಕಿ ಎತ್ತಿಕೊಂಡು ಬರುವ ಭರವಸೆಯನ್ನು ನಕ್ಸಲ್ ನಿಗ್ರ ಪಡೆಯ ಉನ್ನತ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications