ಟೀನೇಜು ವಯಸು ಹುಚ್ಚುಕೋಡಿಯ ಮನಸು

ಮಾರ್ವಾಡಿಗಳ ಪುತ್ರಿಯಾದ ಸೋನು 13ನೇ ವಯಸ್ಸಿನಲ್ಲೇ ಮನೆಯ ಪಕ್ಕದಲ್ಲಿದ್ದ ಉತ್ತರಪ್ರದೇಶ ಮೂಲದ ರಾಮೇಶ್ವರ್‌ನೊಂದಿಗೆ ಲಕ್ನೋಗೆ ಪ್ರೇಮಪಲಾಯನ ಮಾಡಿ ಸಿಕ್ಕಿಬಿದ್ದಿದ್ದಾಳೆ. ಆಡಿನಲಿದು ಓದುವ ವಯಸ್ಸಿನಲ್ಲಿ ಪ್ರೀತಿ ಪ್ರೇಮದ ಪಾಶಕ್ಕೆ ಬಿದ್ದು ಹೆತ್ತು ಹೊತ್ತು ಬೆಳೆಸಿದ ಪೋಷಕರುಗಳಿಗೆ ಕೈಕೊಟ್ಟು ಪ್ರೇಮ ಪಲಾಯನ ಮಾಡುತ್ತಿರುವ ಪ್ರಕರಣಗಳು ಆತಂಕಕಾರಿಯಾಗಿದೆ.
ಬಾರೀ ಘನಂದಾರಿ ಕಾರ್ಯ ಮಾಡಿರುವವನ ರೀತಿ ಪೋಲೀಸರೊಂದಿಗೆ ನಗುನಗುತಾ ಹೆಜ್ಜೆಹಾಕುತ್ತ ನಡೆದು ಬಂದ ಉತ್ತರ ಪ್ರದೇಶದ ಲಕ್ನೋ ಮೂಲಕ 20ರ ಪ್ರಾಯದ ರಾಮೇಶ್ವರನ ಮುಖದಲ್ಲಿ ತಪ್ಪು ಮಾಡಿರುವ ಭಾವನೆ ಇರಲೇ ಇಲ್ಲ. ಬಿಡದಿಯ ಗ್ರಾನೈಟ್ ಪ್ಯಾಕ್ಟರಿಯೊಂದರಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿರುವಾಗಲೇ 7ನೇ ತರಗತಿಯ ಸೇಟು ಚೋಕ್ರಿ (ಹುಡುಗಿ) ಸೋನುವನ್ನ ಪ್ರೀತಿಯ ಗಾಳಕ್ಕೆ ಸಿಲುಕಿಸಿಕೊಂಡಿದ್ದಾನೆ.
ಸೋನು 5ನೇ ತರಗತಿ ಓದುತ್ತಿರುವಾಗಲೇ ಇಬ್ಬರೂ ಪ್ರೀತಿ ಪ್ರೇಮದಾಟವಾಡುತ್ತಿದ್ದರು. 7ನೇ ತರಗತಿ ಪೂರೈಸುತ್ತಿದ್ದಂತೆ ಸೋನುವನ್ನ ವಿವಾಹವಾಗಲು ದೂರದ ಲಕ್ನೋಗೆ ಪರಾರಿಯಾಗಿ ಪೋಲೀಸರ ಅತಿಥಿಯಾಗಿದ್ದಾರೆ. ಮದುವೆಗೆ ಅಪ್ಪ ಅಮ್ಮ ಒಪ್ಪಲ್ಲ ಹೋಗೋಣ ಎಂದು ಸೋನುವೇ ಹೇಳಿದ್ದರಿಂದ ಪ್ರೇಮಪಲಾಯನ ಮಾಡಿದೆವೆಂದು ರಾಮೇಶ್ವರ್ ಯಾವುದೇ ಅಳುಕಿಲ್ಲದೇ ಹೇಳುತ್ತಾನೆ. ಅಪ್ಪ ಅಮ್ಮ ಯಾರು ಇಲ್ಲದ ಸಂದರ್ಭದಲ್ಲಿ ರಾಮೇಶ್ವರನನ್ನ ನಾನು ಕೂಡ ಭೇಟಿ ಮಾಡುತ್ತಿದ್ದೆ. ಮದುವೆ ಬಗ್ಗೆ ಇಬ್ಬರೂ ನಿರ್ಧಾರ ಮಾಡಿದೆವು. ಕನ್ನಡ ಬಾರದ ರಾಮೇಶ್ವರನೊಂದಿಗೆ ನಾನು ಹಿಂದಿಯಲ್ಲೇ ಪ್ರೀತಿ ಪ್ರೇಮದ ಮಾತುಗಳನ್ನಾಡುತ್ತಿದ್ದೆಎಂದು ಸೋನು ಕೂಡ ಹೇಳುತ್ತಾಳೆ.
ಹುಚ್ಚುಕೋಡಿಯ ಮನಸ್ಸಿನ ಸೋನುವಿನ ಹುಂಬ ಮನಸ್ಸಿನ ಗೆಳೆಯ ರಾಮೇಶ್ವರ ಪ್ರೇಮಪಲಾಯನ ಮಾಡಿದ್ದಕ್ಕಾಗಿ ಅತ್ಯಾಚಾರ ಮತ್ತು ಅಪಹರಣ ಪ್ರಕರಣ ರಾಮೇಶ್ವರ ವಿರುದ್ಧ ದಾಖಲಾಗಿದೆ.












Click it and Unblock the Notifications