ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಸ್ಲಿಂ ಮಹಿಳೆ ಇದ್ದತ್ ಬಳಿಕವೂ ಜೀವನಾಂಶಕ್ಕೆ ಅರ್ಹ

By Staff
|
Google Oneindia Kannada News

Muslim women entitled to maintenance after iddat: SC
ನವದೆಹಲಿ, ಡಿ.5: ವಿಚ್ಛೇದಿತ ಮುಸ್ಲಿಂ ಮಹಿಳೆ ಇದ್ದತ್ (ಮೂರು ತಿಂಗಳ) ಅವಧಿಗಷ್ಟೇ ಅಲ್ಲದೆ ಆಕೆ ಮರುಮದುವೆಯಾಗುವ ತನಕವೂ ತನ್ನ ಮಾಜಿ ಪತಿಯಿಂದ ಜೀವನಾಂಶ ಪಡೆಯಲು ಅರ್ಹಳು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ.

ಇಮ್ರಾನ್ ಖಾನ್ ಎಂಬಾತ ತನ್ನ ವಿಚ್ಛೇದಿತ ಪತ್ನಿ ಶಬನಾ ಭಾನು ಜೀವನಾಂಶಕ್ಕೆ ಅರ್ಹಳಲ್ಲ ಎಂದು ಮುಸ್ಲಿಂ ಮಹಿಳಾ ಹಕ್ಕು ಕಾಯ್ಕೆ ಪ್ರಕಾರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ಇದ್ದತ್ ಅವಧಿ ಬಳಿಕ ಆಕೆ ಯಾವುದೇ ಜೀವನಾಂಶಕ್ಕೆ ಬಾಧ್ಯಳಲ್ಲ ಎಂದು ಆತ ವಾದಿಸಿದ್ದ. ಇದಕ್ಕೆ ಪೂರಕವಾಗಿ ಶಬಾನು ಪ್ರಕರಣವನ್ನು ಉಲ್ಲೇಖಿಸಿದ್ದ.

ಈ ಸಂಬಂಧ ವಿಚಾರಣೆ ನಡೆಸಿದ ಬಿ.ಸುದರ್ಶನ್ ರೆಡ್ಡಿ ಹಾಗೂ ದೀಪಕ್ ವರ್ಮಾ ಅವರನ್ನೊಳಗೊಂಡ ನ್ಯಾಯಪೀಠ ಆತನ ವಾದವನ್ನು ತಳ್ಳಿಹಾಕಿ ಮಹತ್ವದ ತೀರ್ಪನ್ನು ನೀಡಿದೆ. ಅಪರಾಧ ದಂಡ ಪ್ರಕ್ರಿಯಾ ಸಂಹಿತೆ ಸೆಕ್ಷನ್ 125 ಹಾಗೂ ಕುಟುಂಬ ನ್ಯಾಯಾಲಯಗಳ ಕಾಯ್ದೆ 1994 ಸೆಕ್ಷನ್ 7ರ ಪ್ರಕಾರ ಮುಸ್ಲಿಂ ಮಹಿಳೆಯೂ ಮರು ಮದುವೆಯಾಗುವ ತನಕ ಜೀವನಾಂಶ ಪಡೆಯಲು ಹಕ್ಕುದಾರಳು ಎಂದು ಸುಪ್ರೀಂ ಕೋಟ್ ತೀರ್ಪನ್ನು ನೀಡಿದೆ.

ಸಿಆರ್ ಪಿಸಿಯ ಸೆಕ್ಷನ್ 125ರ ಪ್ರಕಾರ ಜೀವನಾಂಶವು ಕೇವಲ ಇದ್ದತ್ ಅವಧಿಗೆ ಮಾತ್ರ ಸೀಮಿತವಲ್ಲ. ಎಲ್ಲಿಯವರೆಗೂ ಮರುಮದುವೆಯಾಗುವುದಿಲ್ಲವೊ ಅಲ್ಲಿಯ ತನಕ ತನ್ನ ಮಾಜಿ ಪತಿಯಿಂದ ಮುಸ್ಲಿಂ ಮಹಿಳೆ ಜೀವನಾಂಶ ಪಡೆಯಬಹುದು ಎಂದು ನ್ಯಾಯಪೀಠ ಹೇಳಿದೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X