ಗಣಿಲಾರಿಗಳ ಹಾವಳಿಗೆ ಬಸವಳಿದ ಜನತೆ

ನಗರದ ಯಾವ ರಸ್ತೆಯಲ್ಲಿಯೂ ನೆಟ್ಟಗೆ ಹೋಗಲು ಸಾಧ್ಯವಿಲ್ಲ. ಹೀಗಿದೆ ರಸ್ತೆಗಳ ಗುಣಮಟ್ಟ. ರಸ್ತೆಯಲ್ಲಿ ಸಾಗುವವರು ಧೂಳನ್ನು ಕುಡಿಯುತಾ, ಸುತ್ತಿ ಬಳಸಿ ಓಡಾಡಬೇಕಾಗಿದ್ದು, ವಾಹನ ಸವಾರರಿಗೆ, ಪಾದಚಾರಿಗಳಿಗೆ ಹೆಚ್ಚಿನ ಸಮಸ್ಯೆಯುಂಟಾಗಿದೆ. ಆದರೆ ಇದ್ಯಾವುದು ಜನಪ್ರತಿನಿಧಿಗಳಿಗೆ ಅರ್ಥವಾಗಿಲ್ಲ ಎಂದಲ್ಲಾ. ಯಾಕೋ ಜನತೆಯ ಮೇಲೆ ಸೇಡು ತೀರಿಸಿಕೊಳ್ಳುವಂತಿದೆ ಇವರ ವರ್ತನೆ. ಹೀಗಾಗಿ ನಗರದ ಯಾವ ರಸ್ತೆಯಲ್ಲಿ ಸಾಗಿದರೂ ಕಾಮಗಾರಿ ಪ್ರಗತಿಯಲ್ಲಿದೆ ಎಂಬ ಬರಹ. ಇಲ್ಲಿವೇ ಗುಂಡಿ-ಗೊಟರುಗಳಿಂದ ತುಂಬಿರುವ ರಸ್ತೆಗಳೇ ಎದುರಾಗುತ್ತದೆ.
ಇದರ ಜೊತೆಗೆ ನಗರದಲ್ಲಿ ಗಣಿ ಲಾರಿಗಳ ಹಾವಳಿ ಹೆಚ್ಚಾಗತೊಡಗಿದ್ದು, ನಗರದ ಮುಖ್ಯ ರಸ್ತೆಗಳಲ್ಲೇ ಯಾರನ್ನು ಲೆಕ್ಕಿಸದೆ ಗಣಿಲಾರಿಗಳು ಓಡಾಡತೊಡಗಿರುವುದು ನಿಜಕ್ಕೂ ಆಶ್ಚರ್ಯ ಉಂಟಾಗಿದೆ. ಏಕೆಂದರೆ ಗಣಿ ಲಾರಿಗಳಿಗೆ ನಗರದ ಮುಖ್ಯ ರಸ್ತೆಗಳಲ್ಲಿ ಓಡಾಡಲು ನಿಷೇಧವಿದ್ದರೂ ಕೂಡ ದಿನನಿತ್ಯ ನಿಷೇಧವನ್ನೇ ಉಲ್ಲಂಘಿಸಿ ಓಡಾಡುತ್ತಿರುವುದನ್ನು ನೋಡಿದರೆ ಯಾಕೋ ಸಂಬಂಧಿಸಿದ ಇಲಾಖೆ ಮೇಲೆ ಅನುಮಾನ ಮೂಡುವುದು ಸಹಜ. ಜೊತೆಗೆ ಇಲಾಖೆ ಕಣ್ಣು ಮುಚ್ಚಿಕೊಂಡು ತುಕಡಿಸುತ್ತಿದೆಯೇ ಎಂದೆನಿಸದಿರದು.
ಅದರಲ್ಲೂ ಮುಖ್ಯವಾಗಿ ನಗರ ಬಸ್ ನಿಲ್ದಾಣವಿರುವ ತೀರ್ಥಹಳ್ಳಿ ಸಾಗರ ಮುಖ್ಯ ರಸ್ತೆಯಲ್ಲಿಯೇ ಗಣಿಲಾರಿಗಳು ಯರ್ರಾಬಿರ್ರಿ ಓಡಾಡುತ್ತಿರುವುದು ಟ್ರಾಫಿಕ್ ಸಮಸ್ಯೆಗೆ ಕಾರಣವಾಗಿದೆ. ಒಂದು ಕಡೆ ರಸ್ತೆ ಕಾಮಗಾರಿಯಿಂದ ಕಿರಿಕಿರಿ ಉಂಟಾಗುತ್ತಿದ್ದರೆ ಇನ್ನೊಂದು ಕಡೆ ಗಣಿಲಾರಿಗಳ ಹಾವಳಿಯಿಂದ ಸಮಸ್ಯೆ ತಲೆದೋರಿದೆ. ಅದರಲ್ಲೂ ಮುಖ್ಯವಾಗಿ ಬಸ್‌ಸ್ಟ್ಯಾಂಡ್ ಸುತ್ತಮುತ್ತ ಅತ್ಯಧಿಕ ವಾಹನ ಸಂಚಾರವಿರುವ ಪ್ರದೇಶವಾಗಿದ್ದು, ಗಣಿ ಲಾರಿಗೆ ಈ ಭಾಗದಲ್ಲಿ ಓಡಾಡಲು ಮುಖ್ಯ ಅವಕಾಶ ನೀಡಿರುವುದು ಯಾಕೆ? ಎಂಬುದು ದಾರಿಹೋಕರ ಪ್ರಶ್ನೆ.
ಮೊದಲೇ ನಗರದ ರಸ್ತೆಗಳು ಚಿಂತಾಜನಕ ಸ್ಥಿತಿಯಲ್ಲಿದೆ. ಇದರ ಜೊತೆಗೆ 10-12 ಚಕ್ರದ ಹೆಣಭಾರದ ಗಣಿಲಾರಿಗಳನ್ನು ಓಡಾಡಲು ಬಿಟ್ಟಿರುವುದರಿಂದ ರಸ್ತೆಗಳು ಹಾಳಾಗುವುದಿಲ್ಲವೇ? ಜೊತೆಗೆ ಟ್ರಾಫಿಕ್ ನಿಯಮ ಗಣಿಲಾರಿಗಳಿಗೆ ಇಲ್ಲವೇ? ಎಂಬ ಪ್ರಶ್ನೆ ಎದುರಾದರೂ ಗಣಿಲಾರಿಗಳು ಓಡಾಡಲು ಮುಕ್ತ ಅವಕಾಶ ಮಾಡಿಕೊಟ್ಟಿರುವುದು ಏಕೋ ತಿಳಿಯದಾಗಿದೆ.
ಈ ರೀತಿ ಸಂಚಾರ ಉಲ್ಲಂಘನೆ ಮಾಡಿ ಮುಖ್ಯರಸ್ತೆಗಳಲ್ಲೇ ರೊಯ್ಯಂದು ಸಾಗುವ ಗಣಿಲಾರಿಗಳ ಮೇಲಿನ ಪ್ರೀತಿ ಬಿಟ್ಟು, ಕಡಿವಾಣ ಹಾಕಲು ಸಂಬಂಧಿಸಿದ ಇಲಾಖೆ ಮುಂದಾಗಬಹುದಲ್ಲ?
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications