ರಾಜ್ಯದ ಪಿಂಚಣಿದಾರರಿಗೆ ಸಂತಸದ ಸುದ್ದಿ

ಕರ್ನಾಟಕ ರಾಜ್ಯ ನಿವೃತ್ತಿ ನೌಕರರ ಸಂಘವು ದಿನಾಂಕ 1.7.2009ರಿಂದ 31.10.2009ರವರೆಗೆ ತುಟ್ಟಿಭತ್ಯೆಯ ಪೂರ್ತಿ ಬಾಕಿಯನ್ನು ಕಟಾಯಿಸಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಾರ್ವಜನಿಕ ವಂತಿಗೆ ನಿಧಿಗೆ ಜಮೆ ಮಾಡುವಂತೆ ಸರ್ಕಾರವನ್ನು ವಿನಂತಿಸಿದೆ.
ದೇಣಿಗೆ ನೀಡಲು ಇಚ್ಚಿಸದ ಪಿಂಚಣಿದಾರರು ಸಂಬಂಧಪಟ್ಟ ಬ್ಯಾಂಕ್‌ಗಳಿಗೆ ಅಥವಾ ಪಿಂಚಣಿ ಅಧಿಕಾರಿಗಳಿಗೆ ತಮ್ಮ ಅಭಿಪ್ರಾಯವನ್ನು ದಿನಾಂಕ 15.12.2009ರೊಳಗೆ ಲಿಖಿತ ರೂಪದಲ್ಲಿ ತಿಳಿಸಬೇಕಾಗಿದೆ. ಲಿಖಿತ ಸೂಚನೆ ನೀಡದ ಪ್ರಕರಣಗಳಲ್ಲಿ ಬಾಕಿ ಹಣ ಕಟಾಯಿಸಲು ಆಕ್ಷೇಪಣೆ ಇಲ್ಲವೆಂದು ಭಾವಿಸಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಸಂಘ ತಿಳಿಸಿದೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications