ಬಿಡದಿ ಬಳಿ ಬಿಎಂಟಿಸಿ ಬಸ್ ಪಲ್ಟಿ: 1 ಸಾವು
ಬೆಂಗಳೂರು,
ಡಿ. 3 : ಚಾಲಕನ ಆಚಾತುರ್ಯದಿಂದ ಬೃಹತ್ ಬೆಂಗಳೂರು ಸಾರಿಗೆ ಬಸ್ ಬಿಡದಿ ಬಳಿಯ ಕೊಡಿಯಾಲ ಶ್ಯಾನಮಂಗಲದ ಹತ್ತಿರ ಪಲ್ಟಿ ಹೊಡೆದಿದ್ದು, ಒಬ್ಬ ವ್ಯಕ್ತಿ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ. ಹಲವಾರು ಮಂದಿ ಗಾಯಗೊಂಡಿರುವ ಘಟನೆ ಗುರುವಾರ ಬೆಳಗ್ಗೆ ನಡೆದಿದೆ. id="toptextpromo">ಕರೇನಹಳ್ಳಿ
ನಿವಾಸಿ ಮೋಹನ್ ಸ್ಥಳದಲ್ಲಿ ಸಾವನ್ನಪ್ಪಿರುವ ವ್ಯಕ್ತಿಯಾಗಿದ್ದಾನೆ. ಬಸ್ ಚಾಲಕನ ಆಚಾತುರ್ಯವೇ ದುರ್ಘಟನೆ ಕಾರಣವಾಗಿದೆ. ಬಸ್ ನಲ್ಲಿ 30 ಮಂದಿ ಇದ್ದರು. ಅದರಲ್ಲಿ ನಾಲ್ಕು ಜನರ ಸ್ಥಿತಿ ಚಿಂತಾಜನಕವಾಗಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸುವ ಕೆಲಸ ಆರಂಭವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಲಾಗಿದೆ. id='are-slot-1' class='oiad oi-axt oiadv'> id='top-searched-articles'>(ದಟ್ಸ್
ಕನ್ನಡ ವಾರ್ತೆ)











Click it and Unblock the Notifications