ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಡವರಿಗೆ ರಿಯಾಯಿತಿ ದರದಲ್ಲಿ ನಿವೇಶನ

By Staff
|
Google Oneindia Kannada News

Eshwarappa inaugurates development work in Shivamogga
ಶಿವಮೊಗ್ಗ, ಡಿ.4 : ಶಿವಮೊಗ್ಗ ನಗರದ ಬಡವರಿಗೆ ರಿಯಾಯಿತಿಯಲ್ಲಿ ನಿವೇಶನ ನೀಡಲು ಸರ್ಕಾರ ಅನುಮೋದನೆ ನೀಡಿದ್ದು, ನಗರಾಭಿವೃದ್ದಿ ಪ್ರಾಧಿಕಾರವು ನಿವೇಶನಗಳನ್ನು ಅಭಿವೃದ್ಧಿಪಡಿಸಿ ಬಡವರಿಗೆ ವಿತರಿಸಲು ಮುಂದಾಗಬೇಕೆಂದು ಇಂಧನ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

ಅವರು ನೂತನ ಕಾಮಗಾರಿಗಳ ಹಾಗೂ ಶಿವಮೂರ್ತಿ ವೃತ್ತದಲ್ಲಿ ಸಿಗ್ನಲ್‌ಲೈಟ್ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು. ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರವು ಉತ್ತಮ ರೀತಿಯಲ್ಲಿ ಜನೋಪಯೋಗಿ ಹಾಗೂ ನಗರಾಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜ್ಯ ಮಟ್ಟದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರಗಳ ಅವಶ್ಯಕತೆ ಇದೆಯೆ ಎಂಬ ಚರ್ಚೆ ನಡೆಯುತ್ತಿದೆ. ಆದರೆ ಇಲ್ಲಿನ ನಗರಾಭಿವೃದ್ಧಿ ಪ್ರಾಧಿಕಾರದ ಕಾರ್ಯವೈಖರಿ ನೋಡಿದರೆ ಪ್ರಾಧಿಕಾರದ ಅವಶ್ಯಕತೆ ಇದೆ ಎಂಬುದು ಭಾಸವಾಗುತ್ತದೆ. ಪ್ರಾಧಿಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಇಂಗಿತ ವ್ಯಕ್ತಪಡಿಸಿದರು. ನಂತರ ಸಚಿವರು ಜಿಲ್ಲಾಧಿಕಾರಿಗಳ ನಿವಾಸದ ಸಮೀಪ ಅಭಿವೃದ್ಧಿ ಪಡಿಸಿರುವ ಉದ್ಯಾನವನ ಉದ್ಘಾಟಿಸಿದರು.

ಸೂಡಾ ಅಧ್ಯಕ್ಷ ಜ್ಞಾನೇಶ್ವರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಾಧಿಕಾರದಿಂದ ಹಳೇಬಡಾವಣೆಗಳ ಅಭಿವೃದ್ಧಿ ಹಾಗೂ ಹೊಸಬಡಾವಣೆಗಳ ಪ್ರಾರಂಭ ಇತ್ಯಾದಿ ಕಾರ್ಯಗಳನ್ನು ಕೈಗೊಂಡಿದೆ. ನಗರದಲ್ಲಿ ಅವಶ್ಯಕತೆಯಿರುವ ಕಡೆ ಪಾರ್ಕ್, ಹೈಮಾಸ್‌ಲೈಟ್, ಬಸ್ ತಂಗುದಾಣ, ರಸ್ತೆ ಅಭಿವೃದ್ಧಿ ಕೈಗೊಂಡಿದೆ ಎಂದರಲ್ಲದೆ, ನಗರದ ಕಡುಬಡವರಿಗೆ, ಹಮಾಲರಿಗೆ, ಆಟೋ ಚಾಲಕರಿಗೆ ನಿವೇಶನ ನೀಡುವ ಉದ್ದೇಶ ಹೊಂದಿದೆ ಎಂದರು.

ಸಮಾರಂಭದಲ್ಲಿ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಡಿ.ಎಚ್.ಶಂಕರಮೂರ್ತಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ಸಿ. ಬಸವರಾಜಪ್ಪ, ಶಾಸಕ ಕೆ.ಜಿ.ಕುಮಾರಸ್ವಾಮಿ, ನಗರಸಭೆ ಅಧ್ಯಕ್ಷ ಎನ್.ಜೆ.ರಾಜಶೇಖರ್, ನಗರಸಭೆ ಸದಸ್ಯರುಗಳಾದ ಶಂಕರ್, ಚನ್ನಬಸಪ್ಪ, ರಂಗಪ್ಪ, ಆಯುಕ್ತ ಜಯಣ್ಣ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. ಸೂಡಾ ಆಯುಕ್ತ ಸದಾಶಿವಪ್ಪ ಸ್ವಾಗತಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X