ಐವರಿಗೆ ಇನ್ಫೋಸಿಸ್ ವಿಜ್ಞಾನ ಪ್ರಶಸ್ತಿ

ವಿಜ್ಞಾನ ಪ್ರತಿಷ್ಠಾನದ ಅಧ್ಯಕ್ಷ ಎನ್ ಆರ್ ನಾರಾಯಣಮೂರ್ತಿ ಮತ್ತು ಟ್ರಸ್ಟಿಗಳು ಸೋಮವಾರ ಪ್ರಶಸ್ತಿ ಪುರಷ್ಕೃತ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಜನವರಿ 4 ರಂದು ನವದೆಹಲಿಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರತಿಯೊಂದು ವಿಭಾಗದ ಪ್ರಶಸ್ತಿಯು ತಲಾ 50 ಲಕ್ಷ ಬಹುಮಾನ ಒಳಗೊಂಡಿದೆ.
ಪ್ರಶಸ್ತಿ ಪುರಸ್ಕೃತರ ಪಟ್ಟಿ
ಭೌತವಿಜ್ಞಾನ - ಪುಣೆಯ ತನು ಪದ್ಮನಾಭನ್
ಗಣಿತ ವಿಜ್ಞಾನ - ಅಲಹಾಬಾದ್ ನ ಅಶೋಕ್ ಸೆನ್
ಜೀವವಿಜ್ಞಾನ - ಬೆಂಗಳೂರಿನ ಕೆ ವಿಜಯ್ ರಾಘವನ್
ಅರ್ಥಶಾಸ್ತ್ರ - ಅಭಿಜಿತ್ ವಿನಾಯಕ ಬ್ಯಾನರ್ಜಿ
ಚರಿತ್ರೆ - ನವದೆಹಲಿಯ ಉಪಿಂದರ್ ಸಿಂಗ್
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications