ಬರದ ನಾಡಿಗೆ ಒಲಿದ 'ಲಕ್ಷ್ಮಿ' ಕಟಾಕ್ಷ

ಹತ್ತು ಸಾವಿರ ಮಂದಿಗೆ ಉದ್ಯೋಗ ಅವಕಾಶ ಒದಗಿಸುವ ಹಾಗೂ 50 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆಯ ಉಕ್ಕು ಕಾರ್ಖಾನೆಯನ್ನು
ರಾಜ್ಯದಲ್ಲಿ ಸ್ಥಾಪಿಸಲು ಆರ್ಸೆಲರ್ ಮಿತ್ತಲ್ ಗ್ರೂಪ್ ಮುಂದಾಗಿದೆ. ಈ ಸಂಬಂಧ ಮಿತ್ತಲ್ ಗ್ರೂಪ್‌ನ ಆಡಳಿತ ಮಂಡಳಿಯ ಮುಖ್ಯಸ್ಥ ಸುಧಿರ್ ಮಹೇಶ್ವರಿ ಮತ್ತು ಭಾರತ-ಚೀನಾ ದೇಶಗಳಿಗೆ ಗ್ರೂಪ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿಜಯಕುಮಾರ್ ಮತ್ತಿತರರು ಮುಖ್ಯಮಂತ್ರಿ
ಯಡಿಯೂರಪ್ಪ ಅವರೊಂದಿಗೆ ಗೃಹ ಕಚೇರಿ ಕೃಷ್ಣಾ'ದಲ್ಲಿ ಶುಕ್ರವಾರ ಸಮಾಲೋಚಿಸಿದರು.
ವಾರ್ಷಿಕ ಆರು ಮಿಲಿಯನ್ ಟನ್ ಉಕ್ಕು ತಯಾರಿಸಲು ಮಿತ್ತಲ್ ಗ್ರೂಪ್ ನಿರ್ಧರಿಸಿದ್ದು, ಜತೆಗೆ 750 ಮೆ.ವ್ಯಾ. ಸಾಮರ್ಥ್ಯದ ವಿದ್ಯುತ್ ಉತ್ಪಾದನೆ ಘಟಕವನ್ನೂ ಸ್ಥಾಪಿಸಲಿದೆ. ಮೊದಲ ಹಂತದಲ್ಲಿ 30 ಸಾವಿರ ಹಾಗೂ ಎರಡನೇ ಹಂತದಲ್ಲಿ 20ಸಾವಿರ ಕೋಟಿ ರೂ. ಬಂಡವಾಳ ಹೂಡಲು ಕಂಪನಿ ತೀರ್ಮಾನಿಸಿದೆ.
ಕಾರ್ಖಾನೆ ಸ್ಥಾಪನೆಗಾಗಿ ಬಳ್ಳಾರಿ, ರಾಯಚೂರು, ಹೊಸಪೇಟೆ ಹಾಗೂ ಕೊಪ್ಪಳದಲ್ಲಿ ಸ್ಥಳ ಪರಿಶೀಲನೆ ನಡೆದಿದೆ. ಎಲ್ಲಿ ಕಾರ್ಖಾನೆ ಸ್ಥಾಪಿಸಬೇಕು ಎಂಬ
ಬಗ್ಗೆ ಮುಂದಿನ ತಿಂಗಳ ವೇಳೆಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸುಧೀರ್ ಮಹೇಶ್ವರಿ ತಿಳಿಸಿದರು. ಜಾಗ, ಮೂಲಭೂತ ಸೌಕರ್ಯ ಸೇರಿದಂತೆ ಕಂಪನಿಯ ನಿರೀಕ್ಷೆಗಳನ್ನು ಪೂರೈಸಲು ಸರಕಾರ ಸಿದ್ಧವಿದೆ. ಮುಂದಿನ 2-3 ವರ್ಷದಲ್ಲಿ ಉಕ್ಕು ಕಾರ್ಖಾನೆ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ. ರಾಜ್ಯದಲ್ಲಿ ಭಾರಿ ಪ್ರಮಾಣದಲ್ಲಿ ಬಂಡಾವಳ ಹೂಡಲು ಮಿತ್ತಲ್ ಗ್ರೂಪ್ ಮುಂದಾಗಿರುವುದು ಒಳ್ಳೆಯ ಬೆಳವಣಿಗೆ ಎಂದು ಯಡಿಯೂರಪ್ಪ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications