ಖಾಕಿ ಕಾಮುಕನ ಲೈಂಗಿಕ ಪುರಾಣ

ಮಾನವ ಹಕ್ಕು ಉಲ್ಲಂಘನೆ, ಭ್ರಷ್ಟಾಚಾರ, ಮೇಲಾಧಿಕಾರಿಗಳ ಆದೇಶ ಉಲ್ಲಂಘನೆ ಸೇರಿದಂತೆ ನಾನಾ ಆರೋಪಗಳಿದ್ದರೂ ಪ್ರಸಾದ್ ರಾಜಕೀಯ ಬೆಂಬಲದಿಂದ ಬಚಾವ್ ಆಗಿದ್ದರು. ಆದರೆ, ನಗರ ಪೊಲೀಸರಿಗೆ ಹೆಣ್ಣು ಮಕ್ಕಳ ಶಾಪ ಮಾತ್ರ ಒಂದಿಲ್ಲೊಂದು ರೀತಿಯಲ್ಲಿ ತಾಗುತ್ತದೆ ಎಂಬುದಕ್ಕೆ ಪ್ರಸಾದ್ ಇನ್ನೊಂದು ಸಾಕ್ಷಿ. ಸದ್ಯಕ್ಕೆ ವಿಚಾರಣೆ ಬಾಕಿ ಇದೆ. ಯಾಮಾರಿದರೆ ಶಾಶ್ವತವಾಗಿ ಖಾಕಿ ಕಳಚಿ ಬೇರೆ ಉದ್ಯೋಗ ಅರಸುವುದು ಅನಿವಾರ್ಯ!
ಘಟನೆ ವಿವರ : ತ್ಯಾಗರಾಜನಗರ ನಿವಾಸಿ ಯಶಸ್ವಿನಿ, ಆರ್‌ಟಿ ನಗರದ ಶ್ಯಾಮಸುಂದರ್ ಎಂಬುವರಿಂದ ಆನೇಕಲ್ ತಾಲೂಕು ಜಿಗಣಿ ಹೋಬಳಿ ರಾಗಿಹಳ್ಳಿಯಲ್ಲಿ ಜಮೀನು ಖರೀದಿಸಲು ಫೆಬ್ರವರಿ 23, 2007ರಂದು 26 ಲಕ್ಷ ರೂ. ನೀಡಿದ್ದರು. ಆದರೆ, ಶ್ಯಾಮಸುಂದರ್ ಆಕೆಗೆ ಮೋಸ ಮಾಡಿದ್ದ. ಹೀಗಾಗಿ ಆರ್.ಟಿ.ನಗರ ಠಾಣೆಗೆ ಬಂದು ಯಶಸ್ವಿನಿ ದೂರು ನೀಡಿದ್ದರು. ಇದರಿಂದ ಕೆರಳಿದ ಶ್ಯಾಮಸುಂದರ್ ತನ್ನ ಭಾವ ಮೈದುನನ ಮೂಲಕ ಯಶಸ್ವಿನಿಗೆ ಪ್ರಾಣ ಬೆದರಿಕೆ ಹಾಕಿದ್ದ. ಹೀಗಾಗಿ ಸೂಕ್ತ ರಕ್ಷಣೆ ನೀಡುವಂತೆ ಇನ್‌ಸ್ಪೆಕ್ಟರ್ ಪ್ರಸಾದ್ ಬಳಿ ಮನವಿ ಮಾಡಿದ್ದರು. ಆದರೆ ಈ ಅವಕಾಶವನ್ನು ದುರುಪಯೋಗಪಡಿಸಿಕೊಳ್ಳಲು ಯತ್ನಿಸಿದ ಪ್ರಸಾದ್ ಯಶಸ್ವಿನಿಗೆ ಲೈಂಗಿಕ ಕಿರುಕುಳ ನೀಡಲಾರಂಭಿಸಿದ. ಜುಲೈ 7 ರಂದು ಯಶಸ್ವಿನಿ ಅವರ ತಂದೆ ಮೃತಪಟ್ಟ ವಿಚಾರ ತಿಳಿದ ಪ್ರಸಾದ್ ಮೂರು ದಿನಗಳ ನಂತರ ಅವರಿಗೆ ಕರೆ ಮಾಡಿ ಅಸಭ್ಯವಾಗಿ ಮಾತನಾಡಿದ್ದರು. ಇನ್‌ಸ್ಪೆಕ್ಟರ್ ಮಾತುಗಳಿಂದ ನೊಂದ ಯಶಸ್ವಿನಿ ಮೇಲಾಧಿಕಾರಿಗಳಿಗೆ ದೂರು ನೀಡಿದ್ದಳು.
ಪೊಲೀಸ್ ಭಾಷೆ ಹೀಗಿತ್ತು : ತಂದೆಯನ್ನು ಕಳೆದುಕೊಂಡ ನೋವಿನಲ್ಲಿದ್ದ ಯಶಸ್ವಿನಿಗೆ ರಾತ್ರಿ 11 ಗಂಟೆಗೆ ಕರೆ ಮಾಡಿದ ಪ್ರಸಾದ್ ಹೇಳಿದ ಮಾತುಗಳ ಸ್ಯಾಂಪಲ್ಸ್ ಹೀಗಿವೆ....
ಏನಿಲ್ಲ ಮೇಡಂ, ನನ್ನ ಹೆಂಡ್ತಿ ಊರಲ್ಲಿ ಇಲ್ಲ. ನಾನು ನಿಮ್ಮ ಮನೆಗೆ ಬರಬೇಕು, ನಿಮ್ಮೊಂದಿಗೆ ಏಕಾಂತವಾಗಿ ಇರಬೇಕೆಂದು ಇಚ್ಛಿಸುತ್ತೇನೆ. ನಿಮಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ. ನಿನ್ನ ಮಗ ನನಗೂ ಮಗನಿದ್ದಂತೆ. ನಿನ್ನ ಜೀವನ ಹಾಳು ಮಾಡಿಕೊಳ್ಳಬೇಡಿ. ನನ್ನ ಪಾಡಿಗೆ ಬರುತ್ತೇನೆ ಹೋಗುತ್ತೇನೆ. ನಿಮ್ಮ ಮನೆಗೆ ಒಬ್ಬ ಪೊಲೀಸ್ ಅಧಿಕಾರಿ ಬಂದು ಹೋದರೆ ಗೌರವ ಹೆಚ್ಚುತ್ತದೆ. ಅಕ್ಕ-ಪಕ್ಕದ ಹುಡುಗರು ಕಣ್ಣು ಹಾಕುವುದಿಲ್ಲ. ನಾವಿಬ್ಬರು ಖುಷಿಯಾಗಿರೋಣ. ನಾನು ಎಲ್ಲರನ್ನು ಇಷ್ಟ ಪಡುವುದಿಲ್ಲ. ನನಗೂ ಒಂದು ಚಾನ್ಸ್ ನೀಡುತ್ತೀರಾ? ನಿಮ್ಮ ಆಹ್ವಾನಕ್ಕೆ ಕಾಯುತ್ತಿರುತ್ತೇನೆ. ಎಂದು ಅಸಭ್ಯವಾಗಿ ಮಾತನಾಡಿದ್ದ.
ಈ ಸಂಭಾಷಣೆಯನ್ನು ರೆಕಾರ್ಡ್ ಮಾಡಿಕೊಂಡ ಯಶಸ್ವಿನಿ ಹಿರಿಯ ಅಧಿಕಾರಿಗಳಿಗೆ ತಲುಪಿಸಿದ್ದಳು. ಈ ಸಂಬಂಧ ತನಿಖೆಗೆ ಆದೇಶಿಸಿದ್ದ ಪೊಲೀಸ್ ಆಯುಕ್ತ ಶಂಕರ ಬಿದರಿ, ಕಾಮುಕ ಇನ್‌ಸ್ಪೆಕ್ಟರ್ ಬಿ ಪಿ ಪ್ರಸಾದ್ ಅವರನ್ನು 1965 ರ ಇಲಾಖಾ ನಿಯಮ ಅನುಸಾರ ಅಮಾನತುಗೊಳಿಸಿದ್ದಾರೆ.
(ದಟ್ಸ್ ಕನ್ನ ವಾರ್ತೆ)











Click it and Unblock the Notifications