ಗಣಿಗಾರಿಕೆ ಮುಂದುವರಿಯಲಿದೆ, ಜನಾರ್ದನ ರೆಡ್ಡಿ
ಬೆಂಗಳೂರು,
ನ. 25 : ಭಾರತದ ನ್ಯಾಯಾಂಗ ವ್ಯವಸ್ಥೆಯ ಮೇಲೆ ನನಗೆ ಸಂಪೂರ್ಣ ನಂಬಿಕೆಯಿದೆ. ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಓಬಳಾಪುರಂ ಗಣಿ ಕಂಪನಿಯ ಚಟುವಟಿಕೆ ನಿಲ್ಲಿಸುವಂತೆ ಆಂಧ್ರ ಪ್ರದೇಶ ಸರಕಾರದಿಂದಾಗಲಿ ಅಥವಾ ಸುಪ್ರೀಂಕೋರ್ಟ್ ನಿಂದಾಗಲಿ ನಮಗೆ ಯಾವುದೇ ಶೋಕಾಸ್ ನೋಟೀಸ್ ಬಂದಿಲ್ಲ. ಕಂಪನಿ ಎಂದಿನಂತೆ ಅದಿರು ತೆಗೆಯುವ ಚಟುವಟಿಕೆ ಮುಂದುವರಿಸಲಿದೆ ಎಂದು ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಹೇಳಿದ್ದಾರೆ. id="toptextpromo">ಗಣಿಗಾರಿಕೆ
ವಿಷಯ ಸದ್ಯ ಸುಪ್ರೀಂಕೋರ್ಟ್ ನಲ್ಲಿರುವುದರಿಂದ ಈ ಬಗ್ಗೆ ಹೆಚ್ಚಿಗೆ ಮಾತಾಡುವುದಿಲ್ಲ. ನಮ್ಮ ಕಂಪನಿ ಕೂಡ ಕಾನೂನು ಸಮರ ಆರಂಭಿಸಿದೆ. ಕಂಪನಿಯನ್ನು ಉಳಿಸಿಕೊಳ್ಳಲು ನಾವು ಸಜ್ಜಾಗಿದ್ದೇವೆ. ಉನ್ನತ ನ್ಯಾಯಾಲಯ ನೇಮಿಸಿದ್ದ ಕೇಂದ್ರ ಉನ್ನತಾಧಿಕಾರ ಸಮಿತಿ ಸದಸ್ಯರು ಗಣಿಗಾರಿಕೆ ನಡೆಸುತ್ತಿರುವ ಸ್ಥಳಕ್ಕೆ ಇದುವರೆಗೆ ಭೇಟಿ ನೀಡಿಲ್ಲ. ಈ ಸಮಿತಿ ಯಾವ ಆಧಾರದ ಮೇಲೆ ವರದಿ ನೀಡಿದೆಯೆಂದು ತಿಳಿಯುತ್ತಿಲ್ಲ ಎಂದು ಸಚಿವ ಜನಾರ್ದನರೆಡ್ಡಿ ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>(ದಟ್ಸ್
ಕನ್ನಡ ವಾರ್ತೆ)











Click it and Unblock the Notifications