ಬಾಬ್ರಿ ಧ್ವಂಸ ಆರೋಪಿಗಳಿಗೆ ಶಿಕ್ಷೆ ಖಚಿತ, ಮೊಯ್ಲಿ

Veerappa Moily
ನವದೆಹಲಿ, ನ. 24 : ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಇಂದು ಲಿಬರ್ಹಾನ್ ಆಯೋಗದ ವರದಿ ಇಂದು ಸಂಸತ್ತಿನಲ್ಲಿ ಮಂಡನೆಯಾದ ಬೆನ್ನಲ್ಲೇ ಕೇಂದ್ರ ಸರಕಾರ, ಧ್ವಂಸಕ್ಕೆ ಪ್ರತ್ಯೇಕ್ಷ, ಪರೋಕ್ಷವಾಗಿ ಕಾರಣರಾಗಿರುವ ಎಲ್ಲ 68 ಮಂದಿ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ನಿರ್ಧರಿಸಿದೆ.

17 ವರ್ಷಗಳ ಕಾಲ ಸತತ ತನಿಖೆಯ ನಂತರ ನ್ಯಾಯಮೂರ್ತಿ ಮನಮೋಹನ್ ಸಿಂಗ್ ಲಿಬರ್ಹಾನ್ ಸಲ್ಲಿಸಿರುವ ವರದಿಯನ್ನು ತಳ್ಳಿ ಹಾಕುವ ಪ್ರಶ್ನೆಯೇ ಇಲ್ಲ. ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಆಯೋಗ ಹೆಸರಿಸಿರುವ ಎಲ್ಲ 68 ಮಂದಿ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳಲು ಸರಕಾರ ಚಿಂತನೆ ನಡೆಸಿದೆ ಎಂದು ಕೇಂದ್ರ ಕಾನೂನು ಸಚಿವ ಎಂ ವೀರಪ್ಪ ಮೊಯ್ಲಿ ತಿಳಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಆಯೋಗದಲ್ಲಿ ಎಲ್ಲ ಅಂಶಗಳನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಲಾಗುವುದು ಎಂದರು. ಬಾಬ್ರಿ ಧ್ವಂಸ ಪ್ರಕರಣ ಭಾರತದ ಇತಿಹಾಸದಲ್ಲಿ ಕೆಟ್ಟ ಹೆಸರು ತರುವಂತ ಕೃತ್ಯ. ಇದರ ಹಿಂದೆ ಯಾರೇ ಇದ್ದರೂ ಅವರ ವಿರುದ್ಧ ಸಂವಿಧಾನದಡಿ ಕ್ರಮಕೈಗೊಳ್ಳುವ ಕುರಿತು ತಕ್ಷರೊಂದಿಗೆ ಚರ್ಚಿಸಲಾಗುವುದು. ಬಾಬ್ರಿ ಧ್ವಂಸಕ್ಕೆ ಸಂಬಂಧಿಸಿದಂತೆ ನ್ಯಾಯ ಒದಗಿಸುವುದು ಸರಕಾರದ ಕರ್ತವ್ಯ. ಇದನ್ನು ದೇಶದ ಜನತೆ ಎದುರು ನೋಡುತ್ತಿದೆ ಎಂದು ಮೊಯ್ಲಿ ಹೇಳಿದರು.

ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ, ಪ್ರತಿಪಕ್ಷದ ನಾಯಕ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಉತ್ತರ ಪ್ರದೇಶದ ಮಾಜಿ ಸಿಎಂ ಕಲ್ಯಾಣ್ ಸಿಂಗ್, ಶಿವಸೇನೆ ಮುಖ್ಯಸ್ಥ ಬಾಳಾ ಠಾಕ್ರೆ, ಉಮಾಭಾರತಿ, ವಿಎಚ್ ಪಿಯ ಆಚಾರ್ಯ ಗಿರಿರಾಜ ಕಿಶೋರ್, ಪ್ರವೀಣಬಾಯಿ ತೂಗಾಡಿಯಾ, ದಿವಂಗತ ವಿಜಯ್ ರಾಜೇ ಸಿಂಧಿಯಾ, ಪ್ರಮೋದ್ ಮಹಾಜನ್, ಮಾಜಿ ಕೇಂದ್ರ ಮಂತ್ರಿ ಶಂಕರ್ ಸಿಂಗ್ ವಾಘೇಲಾ, ಕೆ ಸುದರ್ಶನ್, ಗೋವಿಂದಾಚಾರ್ಯ, ಎಸ್ ಪಿ ಸಿಂಘಾಲ್, ವಿನಯ್ ಕಟಿಯಾರ್, ಅಶೋಕ್ ಸಿಂಘಾಲ್, ಲಲಿತ್ ಟಂಡನ್, ಪುರುಷೋತ್ತಮ ನಾರಾಯಣ ಸಿಂಗ್, ಎಚ್ ಪಿ ಶೇಷಾದ್ರಿ, ರಾಜೇಂದ್ರ ಗುಪ್ತಾ, ನಿವೃತ್ತ ಪೊಲೀಸ್ ಐಜಿ ಎ ಕೆ ಶರಣ್, ಉತ್ತರ ಪ್ರದೇಶದ ಮಾಜಿ ಪ್ರವಾಸೋಧ್ಯಮ ಕಾರ್ಯದರ್ಶಿ ಎ ಸಿಂಹ್ ವರದಿಯಲ್ಲಿರುವ ಪ್ರಮುಖ ಹೆಸರುಗಳು.

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+