ನೈಸ್ ವಿರುದ್ಧ ಮತ್ತೆ ದೇವೇಗೌಡರ ಗುಡುಗು

ಈ ಸಂಬಂಧ ಅವರು ನ್ಯಾಯಾಲಯಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಕರ್ನಾಟಕ ಸರಕಾರದ ನಿರ್ದೇಶನದನ್ವಯ ಅಡ್ವೋಕೇಟ್ ಜನರಲ್ ವರ್ತಿಸಿದ್ದಾರೆ. ನೈಸ್ ಕಂಪನಿಗೆ ಅನುಕೂಲವಾಗುವಂತೆ ಅವರು ನಡೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಬಿಎಂಐಸಿಗೆ ಸಂಬಂಧಿಸಿ ವಿಚಾರಣೆ ನವೆಂಬರ್ 26 ರಂದು ನಡೆಯಲಿದೆ.
ಕಳೆದ ಅ.27 ರಂದು ಕರ್ನಾಟಕ ಸರಕಾರಕ್ಕೆ ಸುಪ್ರಿಂಕೋರ್ಟ್ ನಿರ್ದೇಶನ ನೀಡಿತ್ತು. ಯೋಜನೆಯನ್ನು ಶೀಘ್ರವಾಗಿ ಪೂರ್ಣಗೊಳಿಸಲು ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲು ನಿರ್ದೇಶನ ನೀಡಿತ್ತು. ಅಲ್ಲದೇ, ಬಿಎಂಐಸಿ ಯೋಜನೆಯ ಸದ್ಯದ ಸ್ಥಿತಿಗತಿ ಬಗ್ಗೆ ವರದಿ ಸೂಚಿಸಿತ್ತು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications