ಅಣುಸ್ಥಾವರದ ಮೇಲೆ ದಾಳಿ ಭೀತಿ, ಕಟ್ಟೆಚ್ಚರ

ಮುಂಬೈ ಮೇಲಿನ ದಾಳಿಯ ಸಂಚನ್ನು ರೂಪಿಸಿದ್ದ ಎನ್ನಲಾಗಿರುವ ಡೇವಿಡ್ ಹೆಡ್ಲಿ ದೇಶದ ಮಹತ್ವದ ಅಣುಸ್ಥಾವರಗಳು ಇರುವ ಗುಜರಾತ್, ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶಗಳಿಗೆ ಭೇಟಿ ನೀಡಿದ್ದ. ದೇಶದ ಪ್ರಮುಖ ಆರು ಅಣು ಸ್ಥಾವರಗಳಾದ ಉತ್ತರ ಪ್ರದೇಶದ ನರೋರಾ, ಕರ್ನಾಟಕದ ಕೈಗಾ, ಮಹಾರಾಷ್ಟ್ರದ ತಾರಾಪುರ, ತಮಿಳುನಾಡಿನ ಕಲ್ಪಾಕಂ, ಗುಜರಾತ್‌ನ ಕಕ್ರಾಪಾರ್, ರಾಜಸ್ತಾನದ ಕೋಟಾ ಮತ್ತು ಟ್ರಾಂಬೆಯಲ್ಲಿರುವ ಭಾಭಾ ಪರಮಾಣು ಸಂಶೋಧನಾ ಸಂಸ್ಥೆ ಸೇರಿದಂತೆ ಅಣು ಘಟಕಗಳ ಸುತ್ತ ಕಟ್ಟೆಚ್ಚರ ವಹಿಸಲು ಕೇಂದ್ರ ಗೃಹ ಇಲಾಖೆ ರಾಜ್ಯ ಸರಕಾರಗಳಿಗೆ ಆದೇಶ ನೀಡಿದೆ.
ಈ ಮಧ್ಯೆ ಲಷ್ಕರ್ ಉಗ್ರನೆಂದು ಶಂಕಿಸಲಾದ ಡೇವಿಡ್ ಹೆಡ್ಲಿ ಜತೆ ಸಂಪರ್ಕಕ್ಕೆ ಬಂದ ಬಾಲಿವುಡ್ ಚಿತ್ರ ನಿರ್ದೇಶಕ ಮಹೇಶ್ ಭಟ್ ಪುತ್ರ ರಾಹುಲ್ ಭಟ್‌ಗೆ ಮುಂಬೈ ಬಿಟ್ಟು ತೆರಳದಂತೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಸೂಚಿಸಿದೆ.
(ಏಜೆನ್ಸೀಸ್)












Click it and Unblock the Notifications