ಮುಲಾಯಂ ವಿಶ್ವಾಸ ಘಾತುಕ: ಕಲ್ಯಾಣ್ ಸಿಂಗ್

ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಒಬ್ಬ ವಿಶ್ವಾಸ ಘಾತುಕ ಎಂದು ಕಿಡಿಕಾರಿರುವ ಕಲ್ಯಾಣ್ ಸಿಂಗ್, ಉಪಚುನಾವಣೆಯ ಸೋಲನ್ನು ಒಪ್ಪಿಕೊಳ್ಳುವ ಧೈರ್ಯ ಮುಲಾಯಂಗೆ ಇಲ್ಲದೆ ಸೋಲಿಗೆ ನನ್ನನ್ನು ಹೊಣೆ ಮಾಡುತ್ತಿದ್ದಾರೆ. ನನ್ನ ಜೀವನದಲ್ಲಿ ಸಾಕಷ್ಟು ತಪ್ಪುಗಳನ್ನು ಮಾಡಿದ್ದೇನೆ. ಅದರಲ್ಲಿ ಮುಲಾಯಂ ಜೊತೆ ಸ್ನೇಹ ಬೆಳೆಸಿದ್ದು ಅತಿ ದೊಡ್ಡ ತಪ್ಪು ಎಂದು ಮುಲಾಯಂ ಮೇಲೆ ಕಿಡಿ ಕಾರಿದ್ದಾರೆ.
ನಾನು ಹಿಂದಿನಿಂದಲೂ ಆರ್ ಎಸ್ ಎಸ್ ಸ್ವಯಂ ಸೇವಕನಾಗಿದ್ದೆ; ಮುಂದೆಯೂ ಆಗಿರುತ್ತೇನೆ. ನನ್ನ ಜೀವಿತಾವಧಿಯಲ್ಲಿ ಅಯೋಧ್ಯೆಯಲ್ಲಿ ಬೃಹತ್ ರಾಮಮಂದಿರ ನೋಡಬೇಕೆಂಬ ಬಯಕೆಯಿದೆ. ಸಮಾಜವಾದಿ ಅಥವಾ ಕಾಂಗ್ರೆಸ್ ಪಕ್ಷಗಳಿಂದ ಆ ಕಾರ್ಯ ಸಾಧ್ಯವಿಲ್ಲ. ಆದ್ದರಿಂದ ರಾಷ್ಟ್ರವಾದಿ ಪಕ್ಶ ಬಿಜೆಪಿಯನ್ನು ಬಲಪಡಿಸಬೇಕಾದ ಅಗತ್ಯವಿದೆ ಎಂದು ಹೇಳಿಕೆ ನೀಡಿರುವ ಕಲ್ಯಾಣ್ ಸಿಂಗ್ ಬಿಜೆಪಿ ಸೇರುವ ಸ್ಪಷ್ಟ ಸುಳಿವು ನೀಡಿದ್ದಾರೆ.
(ಏಜೆನ್ಸೀಸ್)












Click it and Unblock the Notifications