ಬಿಜೆಪಿ ಸಚಿವರ ಭೇಟಿ ನಿಜ: ಕುಮಾರಸ್ವಾಮಿ

ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ಕುರಿತು ಚರ್ಚಿಸಲು ಸಚಿವರು ಭೇಟಿಯಾಗಿದ್ದರು ಎಂದಿರುವ ಕುಮಾರಸ್ವಾಮಿ ಸಚಿವರ ಹೆಸರನ್ನು ಹೇಳಲು ನಿರಾಕರಿಸಿದ್ದಾರೆ. ಅಧಿಕಾರಿಗಳ ವರ್ಗಾವಣೆ ಬಗ್ಗೆ ಯಡಿಯೂರಪ್ಪ ಸಮರ್ಥಿಸಿಕೊಂಡಿರುವ ಬಗ್ಗೆಯೂ ಕುಮಾರಸ್ವಾಮಿ ಕಿಡಿ ಕಾರಿದರು.
ಇನ್ನೆಂದೂ ವರ್ಗಾವಣೆ ಮಾಡುವುದಿಲ್ಲ ಎಂದು ಬಡಾಯಿ ಕೊಚ್ಚಿಕೊಂಡಿರುವ ಯಡಿಯೂರಪ್ಪ, ವಾರಕ್ಕೊಮ್ಮೆ ಡಜನ್ ಗಟ್ಟಲೆ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಮೂಲಕ ಅವರ ಹುದ್ದೆಯ ಘನತೆಯನ್ನು ಗಾಳಿಗೆ ತೂರಿದ್ದಾರೆ ಎಂದು ಕುಮಾರಸ್ವಾಮಿ ಆಕ್ಷೇಪಿಸಿದರು.
ಭೇಟಿ ನಡೆದಿಲ್ಲ: ಯಡಿಯೂರಪ್ಪ
ನಮ್ಮ ಪಕ್ಷದ ಯಾವುದೇ ಸಚಿವರು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿಲ್ಲ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ನಮ್ಮ ಬಗ್ಗೆ ಕುಮಾರಸ್ವಾಮಿ ಅವರಿಗೆ ಅಷ್ಟೊಂದು ಕಾಳಜಿ ಇದ್ದರೆ ಸಲಹೆ ಕೊಡಲಿ ಎಂದು ವ್ಯಂಗವಾಡಿದರು. ಆಗ ಪಕ್ಕದಲ್ಲೇ ಇದ್ದ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರು ತಾವಂತೂ ಭೇಟಿಯಾಗಿಲ್ಲ ಎಂದು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications