ಬಿಜೆಪಿ ಹಿರಿಯ ಸಚಿವರಿಂದ ಎಚ್ಡಿಕೆ ಭೇಟಿ

ರೆಡ್ಡಿಗಳು ಮತ್ತು ಯಡಿಯೂರಪ್ಪ ನಡುವಿನ ಸಮರ ಇನ್ನೂ ಬಗೆಹರಿಯದಿಲ್ಲದಿರುವ ಸನ್ನಿವೇಶದಲ್ಲಿ ಈ ರಹಸ್ಯ ಭೇಟಿ ಗಮನಾರ್ಹ. ಕೋರ್ ಕಮಿಟಿ ರಚನೆ ಹಾಗೂ ನಂತರದ ಬೆಳವಣಿಗೆಯಲ್ಲಿ ರೆಡ್ಡಿ ಸಚಿವರೊಂದಿಗೆ ಭಿನ್ನಾಭಿಪ್ರಾಯ ಬಗೆಹರೆಯದಿದ್ದಲ್ಲಿ ಹೊಸದೊಂದು ರಾಜಕೀಯ ಸಾಹಸಕ್ಕೆ ಯಡಿಯೂರಪ್ಪ ಬಣ ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಜೆ ಡಿ ಎಸ್ ನತ್ತ ಸ್ನೇಹಹಸ್ತ ಚಾಚಲಾಗಿದೆ.
ಮೊದಲ ಸುತ್ತಿನ ಮಾತುಕತೆ ನಡೆದಿದ್ದು ಕೆಲ ದಿನಗಳಲ್ಲಿ ಹಿರಿಯ ಮುಖಂಡರು ಮುಖಾಮುಖಿಯಾಗಿ ಚರ್ಚಿಸುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
(ಏಜೆನ್ಸೀಸ್)











Click it and Unblock the Notifications