ಸಿಎಂ ಉದಾಸಿ ಸ್ಪೀಕರ್ ಆಗುವ ಸಾಧ್ಯತೆ ?

ಉದಾಸಿ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ರೆಡ್ಡಿ ಬಣ ಪಟ್ಟು ಹಿಡಿದಿರುವ ಹಿನ್ನೆಲೆಯಲ್ಲಿ ಅವರ ರಾಜೀನಾಮೆ ಪಡೆದು ಸಭಾಧ್ಯಕ್ಷ ಸ್ಥಾನಕ್ಕೆ ಅವರನ್ನೇ ನೇಮಕ ಮಾಡುವ ಸಂಭವ ಹೆಚ್ಚಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಉಪಸಭಾಪತಿ ಕೆ ಜಿ ಭೂಪಯ್ಯ ಅವರನ್ನೇ ಸಭಾಪತಿಯಾಗಿ ಏಕೆ ಮುಂದುವರಿಸಬಾರದು ಎಂಬ ಮಾತೂ ಇದೆ. ಜೊತೆಗೆ ಸುರೇಶಕುಮಾರ್, ಕಾಗೇರಿ ಅವರ ಹೆಸರುಗಳು ಇವೆ ಎನ್ನಲಾಗಿದೆ.
ಉದಾಸಿ ಅವರೆ ಸಭಾಪತಿಯಾಗಲಿದ್ದಾರೆ ಕಾರಣ ಅವರ ಮಗ ಶಿವಕುಮಾರ್ ಉದಾಸಿ ಹಾವೇರಿ ಲೋಕಸಭೆ ಕ್ಷೇತ್ರಕ್ಕೆ ಪಕ್ಷದ ಟಿಕೆಟ್ ನೀಡಿದರೆ ಸ್ಪೀಕರ್ ಹುದ್ದೆ ಅಲಂಕರಿಸುವೆ ಎಂದು ಭರವಸೆ ನೀಡಿದ್ದರು ಎನ್ನಲಾಗಿದೆ. ಶಿವಕುಮಾರ್ ಉದಾಸಿ ಇದೀಗ ಹಾವೇರಿ ಕ್ಷೇತ್ರದ ಸಂಸದರಾಗಿದ್ದಾರೆ. ನವೆಂಬರ್ 17 ರಂದು ಶೆಟ್ಟರ್ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications