ರೆಡ್ಡಿಗಳಿಗೆ ಪಾಠ ಕಲಿಸುತ್ತೇವೆ, ಕರವೇ
ಬೆಂಗಳೂರು,
ನ. 13 : ಕಾಳಿಂಗ ಸರ್ಪಗಳ೦ತಿರುವ ರೆಡ್ಡಿ ಸಹೋದರರರನ್ನು ಸಾಕಿಕೊಳ್ಳಬೇಡಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದೆ. ಸರ್ಪಗಳನ್ನು ನಿಯಂತ್ರಿಸುವ ಪುಂಗಿ ನನ್ನ ಬಳಿ ಇದೆ ಎಂದು ಹೇಳಿದರು. ಈಗ ಆ ಸರ್ಪಗಳು ಕೆರಳಿ ನಿಂತಿವೆ. ಆದರೆ, ಮುಖ್ಯಮಂತ್ರಿಗಳ ಪುಂಗಿ ಕೆಲಸ ಮಾಡುತ್ತಿಲ್ಲ, ರೆಡ್ಡಿಗಳನ್ನು ಹಾದಿ ಬೀದಿಯಲ್ಲಿ ವಿಚಾರಿಸಿಕೊಳ್ಳುವ ಕಾಲ ಬಂದಿದೆ ಇವರಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಕರವೇ ಅಧ್ಯಕ್ಷ ನಾರಾಯಣ ಗೌಡ ಹೇಳಿಕೆ ನೀಡಿದ್ದಾರೆ. id="toptextpromo">ಮಾಧ್ಯಮ
ಪ್ರತಿನಿಧಿಗಳೊಂದಿಗೆ ಅವರು ಮಾತನಾಡುತ್ತಿದ್ದರು. ನಮ್ಮ ನೋವಿಗೆ ಸರಕಾರ ಸ್ಪಂದಿಸುತ್ತದೆ ಎಂದು ನೆರೆ ಸಂತ್ರಸ್ತರು ಕನಸು ಕಂಡಿದ್ದರು, ಇದಕ್ಕೆ ಪೂರಕವಾಗಿ ಸಾಕಷ್ಟು ಆರ್ಥಿಕ ನೆರವು ಕೂಡ ದೊರೆಯಿತು. ಆದರೆ, ಬಿಜೆಪಿಯ ಆಂತರಿಕ ಕಚ್ಚಾಟದಲ್ಲಿ ಸಂತ್ರಸ್ತರ ಕನಸು ನುಚ್ಚುನೂರಾಗಿದೆ. ಕರ್ನಾಟಕದ ಅಧಿಕಾರವನ್ನು ಯಾವ ಕಾರಣಕ್ಕೂ ರೆಡ್ಡಿಗಳ ಪಾಲಾಗುವುದಕ್ಕೆ ಬಿಡುವುದಿಲ್ಲ ಎಂದು ನಾರಾಯಣ ಗೌಡ ಹೇಳಿಕೆ ನೀಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>(ದಟ್ಸ್
ಕನ್ನಡ ವಾರ್ತೆ)











Click it and Unblock the Notifications