ಶೋಭಾ ಒಳ್ಳೆ ಕೆಲಸಗಾರ್ತಿ, ರೇವಣ್ಣ

ಯಡಿಯೂರಪ್ಪ ಮತ್ತು ಬಿಜೆಪಿಯ ಮುಖ ನೋಡಿ ಜನ ಆ ಪಕ್ಷಕ್ಕೆ ಮತ ಹಾಕಿರೋದು, ಕೋರ್ ಕಮಿಟಿಗಲ್ಲ. ಒಂದು ವೇಳೆ ಸಮ್ಮಿಶ್ರ ಸರಕಾರ ಇದ್ದರೆ ಮಾತ್ರ ಕೋರ್ ಕಮಿಟಿ ರಚಿಸಬೇಕು. ಸರಕಾರದಲ್ಲಿ ರೆಡ್ಡಿ ಬಣ ಮತ್ತು ಯಡ್ಡಿ ಬಣ ಎನ್ನುವ ಗುಂಪುಗಳಿವೆ, ಬೇರೆ ಯಾವ ಮುಖ್ಯಮಂತ್ರಿಗಾದರೂ ಈ ಪರಿಸ್ಥಿತಿ ಬಂದಿದ್ದರೆ ರಾಜೀನಾಮೆ ಬಿಸಾಕಿ ಮರ್ಯಾದೆ ಉಳಿಸಿಕೊಳ್ಳುತ್ತಿದ್ದರು ಎಂದು ರೇವಣ್ಣ ಮುಖ್ಯಮಂತ್ರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸರಕಾರದ ಪ್ರಮುಖ ನಿರ್ಧಾರವನ್ನು ಕೋರ್ ಕಮಿಟಿ ತೆಗೆದುಕೊಳ್ಳುವುದಾದರೆ ಮುಖ್ಯಮಂತ್ರಿ ಯಾಕಿರಬೇಕು, ಇದು ಬಿಜೆಪಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅವಮಾನ. ಯಾವ ಮುಖ್ಯಮಂತ್ರಿಗಳಿಗೂ ಈ ರೀತಿಯ ಅವಮಾನ ಆಗಬಾರದಾಗಿತ್ತು, ಯಡಿಯೂರಪ್ಪ ರಾಜೀನಾಮೆ ನೀಡಿ ಗೌರವಯುತವಾಗಿ ಹೊರ ನಡೆದರೆ ಉತ್ತಮ ಎಂದು ರೇವಣ್ಣ ಅಭಿಪ್ರಾಯಪಟ್ಟಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications